ಕಾಂಗರೂ ಪಡೆ ಎದುರು ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್‌; 352 ರನ್‌

ಬುಧವಾರ, ಜೂನ್ 19, 2019
28 °C
ವಿಶ್ವಕಪ್‌ ಕ್ರಿಕೆಟ್‌

ಕಾಂಗರೂ ಪಡೆ ಎದುರು ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್‌; 352 ರನ್‌

Published:
Updated:

ಲಂಡನ್: ದ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಭಾರತ–ಆಸ್ಟ್ರೇಲಿಯಾ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್‌ ನಡೆಸಿತು. ಶಿಖರ್‌ ಧವನ್‌ ಶತಕ ಪೂರೈಸಿದರು. ಆಸ್ಟ್ರೇಲಿಯಾ ಗೆಲುವಿಗೆ ಭಾರತ 353 ರನ್‌ ಗುರಿ ನೀಡಿದೆ.

ಕ್ಷಣಕ್ಷಣದ ಸ್ಕೋರ್‌: https://bit.ly/2QXUHkI

ಆರಂಭದಲ್ಲಿ ನಿಧಾನ ಗತಿಯ ಆಟಕ್ಕೆ ಮುಂದಾದ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ನಂತರದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿ, ತಂಡದ ರನ್‌ ಗಳಿಕೆಗೆ ಭದ್ರ ಬುನಾದಿ ಹಾಕಿದರು. ರೋಹಿತ್‌ ಅರ್ಧ ಶತಕ ಪೂರೈಸಿದರು. ರೋಹಿತ್‌ ಒಂದು ಸಿಕ್ಸರ್‌ ಹಾಗೂ 3 ಬೌಂಡರಿ, ಧವನ್‌ 16 ಬೌಂಡರಿ ದಾಖಲಿಸಿದ್ದಾರೆ. ಈ ಮೂಲಕ ಭಾರತ ಬೃಹತ್‌ ಮೊತ್ತ ದಾಖಲಿಸುವ ಸಾಧ್ಯತೆ ಹೆಚ್ಚಿದೆ. 

ಆರಂಭದ ಬೌಲರ್‌ಗಳಾದ ಮಿಷೆಲ್‌ ಸ್ಟಾರ್ಕ್‌ ಮತ್ತು ಪ್ಯಾಟ್‌ ಕಮಿನ್ಸ್‌ ಅವರ ವಿಕೆಟ್‌ ಗಳಿಸುವ ಪ್ರಯತ್ನ ಫಲ ನೀಡಲಿಲ್ಲ. ಭಾರತದ ಆರಂಭಿಕ ಜತೆಯಾಟ ಮುರಿಯಲು ಆಸ್ಟ್ರೇಲಿಯಾ ಆರು ಬೌಲರ್‌ಗಳೊಂದಿಗೆ ಪ್ರಯತ್ನ ನಡೆಸಿತು. ಎರಡನೇ ಓವರ್‌ನಲ್ಲಿ ರೋಹಿತ್‌ ಶರ್ಮಾ ನೀಡಿದ ಕ್ಯಾಚ್‌ ಕೈಚೆಲ್ಲಿದ ನೇಥನ್‌ ಕಾಲ್ಟರ್‌ನೈಲ್‌ ಪೇಚಾಡಿದರು. ಆದರೆ, ತನ್ನದೇ ಓವರ್‌ನಲ್ಲಿ ರೋಹಿತ್‌(57) ವಿಕೆಟ್ ಕಬಳಿಸಲು ಸಫಲರಾದರು. 

117 ರನ್‌ ಗಳಿಸಿದ್ದ ಶಿಖರ್‌ ಧವನ್‌ಗೆ(109 ಎಸೆತ) ಆಟವನ್ನು ಮಿಷೆಲ್ ಸ್ಟಾರ್ಕ್‌ ಕೊನೆ ಮಾಡಿದರು. ತಂಡದ ನಾಯಕ ವಿರಾಟ್‌ ಕೊಹ್ಲಿ(82) ಮತ್ತು ಹಾರ್ದಿಕ್‌ ಪಾಂಡ್ಯ(48), ಎಂ.ಎಸ್‌.ಧೋನಿ(27) ಹಾಗೂ ಕೆ.ಎಲ್‌.ರಾಹುಲ್‌ 11 ರನ್‌ ಗಳಿಸಿದರು. 

ಇದನ್ನೂ ಓದಿ: ಭಾರತ– ಆಸ್ಟ್ರೇಲಿಯಾ ಹಣಾಹಣಿ: ಟಾಸ್ ಗೆದ್ದ ವಿರಾಟ್ ಬಳಗ ಬ್ಯಾಟಿಂಗ್‌ 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !