ಬಾಂಗ್ಲಾ ಭರ್ಜರಿ ಬ್ಯಾಟಿಂಗ್‌: ದಕ್ಷಿಣ ಆಫ್ರಿಕಾ ಗೆಲುವಿಗೆ 331 ರನ್‌ ಗುರಿ

ಬುಧವಾರ, ಜೂನ್ 26, 2019
28 °C
ವಿಶ್ವಕಪ್‌ ಕ್ರಿಕೆಟ್‌

ಬಾಂಗ್ಲಾ ಭರ್ಜರಿ ಬ್ಯಾಟಿಂಗ್‌: ದಕ್ಷಿಣ ಆಫ್ರಿಕಾ ಗೆಲುವಿಗೆ 331 ರನ್‌ ಗುರಿ

Published:
Updated:

ಲಂಡನ್‌: ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾಗೆ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ದಿಟ್ಟ ಉತ್ತರ ನೀಡಿದ್ದಾರೆ. 300 ರನ್‌ ಗಡಿ ದಾಟುವ ಮೂಲಕ ದಕ್ಷಿಣ ಆಫ್ರಿಕಾ ಗೆಲುವಿಗೆ ಸವಾಲಿನ ಮೊತ್ತ ಮುಂದಿರಿಸಿದೆ. 

ಸ್ಕೋರ್‌ ವಿವರhttps://bit.ly/311EQX4

ಇಲ್ಲಿನ ದಿ ಓವಲ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆಯುತ್ತಿರುವ ಪಂದ್ಯ ಕ್ರಿಕೆಟ್‌ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಆರಂಭದಿಂದಲೂ ದಿಟ್ಟ ಹೋರಾಟ ನಡೆಸಿದ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ತಂಡದ ಮೊತ್ತ 300ರ ಗಡಿ ದಾಟಿಸುವಲ್ಲಿ ಸಫಲರಾದರು. ಶಕೀಬ್ ಅಲ್ ಹಸನ್(75) ಹಾಗೂ ಮುಷಫ್ಕಿರ್‌ ರಹಿಮ್‌(78) ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ ತಂಡ 330 ರನ್‌ ದಾಖಲಿಸಿತು.

ಆರು ವಿಕೆಟ್‌ ನಷ್ಟಕ್ಕೆ 330 ರನ್‌ ಗಳಿಸಿದ್ದು, ದಕ್ಷಿಣ ಆಫ್ರಿಕಾಗೆ ದೊಡ್ಡ ಸವಾಲನ್ನು ಮುಂದಿಟ್ಟಿದೆ. 

 

ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮೆಹಮುದುಲ್ಲಾ, ತಂಡದ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದರು. ಹಸನ್‌ ಹಾಗೂ ರಹಿಮ್‌ ಹೋರಾಟವನ್ನು ಮುಂದುವರಿಸಿದ ಅವರು, 33 ಎಸೆತಗಳಲ್ಲಿ 46 ರನ್‌ ಗಳಿಸಿದರು. ಮೊಹಮ್ಮದ್ ಮಿಥುನ್(21) ಹಾಗೂ ಮೊಸಾದಿಕ್ ಹೊಸೆನ್(26) ಸಹ ತಂಡಕ್ಕೆ ಆಸರೆಯಾದರು. 

ಆ್ಯಂಡಿಲೆ ಪೆಹ್ಲುಕವ್ಯಾಯೊ ಎಸೆತದಲ್ಲಿ ತಮೀಮ್ ಇಕ್ಬಾಲ್(16) ಕ್ಯಾಚ್‌ ಕೊಟ್ಟು ಹೊರನಡೆದರು. 30 ಎಸೆತಗಳಲ್ಲಿ 42 ರನ್‌ ಗಳಿಸಿದ್ದ ಸೌಮ್ಯಾ ಸರ್ಕಾರ್‌ ದಿಟ್ಟ ಪ್ರದರ್ಶನಕ್ಕೆ ಕ್ರಿಸ್ ಮಾರಿಸ್ ತಡೆಯೊಡ್ಡಿದರು. 

ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ತಂಡವು ಸೋಲನುಭವಿಸಿತ್ತು. ಆ ಪಂದ್ಯದಲ್ಲಿ ಫಾಫ್ ಡುಪ್ಲೆಸಿ ಬಳಗವು ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಇನ್ನೂ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಮಷ್ರಫೆ ಮೊರ್ತಜಾ ನೇತೃತ್ವದ ಬಾಂಗ್ಲಾದೇಶ ತಂಡವು ಭಾರತದ ಎದುರು ಸೋತಿತ್ತು.

ತಂಡಗಳು:

ದಕ್ಷಿಣ ಆಫ್ರಿಕಾ: ಫಾಫ್ ಡು ಪ್ಲೆಸಿ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್), ಜೆಪಿ ಡುಮಿನಿ, ಆ್ಯಡನ್ ಮರ್ಕರಮ್, ಡೇವಿಡ್ ಮಿಲ್ಲರ್, ಕ್ರಿಸ್ ಮಾರಿಸ್, ಲುಂಗಿ ಗಿಡಿ, ಆ್ಯಂಡಿಲೆ ಪೆಹ್ಲುಕವ್ಯಾಯೊ, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೇಜ್ ಶಮ್ಸಿ, ಇಮ್ರಾನ್ ತಾಹೀರ್, ಡೇಲ್ ಸ್ಟೇನ್  

ಬಾಂಗ್ಲಾದೇಶ: ಮಷ್ರಫೆ ಮೊರ್ತಜಾ (ನಾಯಕ), ಶಕೀಬ್ ಅಲ್ ಹಸನ್, ಲಿಟನ್ ದಾಸ್,  ಮೆಹದಿ ಹಸನ್, ಮೊಸಾದಿಕ್ ಹೊಸೆನ್, ರುಬೆಲ್ ಹೊಸೆನ್, ತಮೀಮ್ ಇಕ್ಬಾಲ್, ಅಬು ಜಯೇದ್, ಮೆಹಮುದುಲ್ಲಾ, ಮೊಹಮ್ಮದ್ ಮಿಥುನ್,  ಮುಷ್ಫಿಕರ್ ರಹೀಮ್, ಮುಸ್ತಫೀಜುರ್ ರೆಹಮಾನ್, ಶಬ್ಬೀರ್ ರೆಹಮಾನ್, ಮೊಹಮ್ಮದ್ ಸೈಫುದ್ದೀನ್, ಸೌಮ್ಯಾ ಸರ್ಕಾರ್.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !