ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಜಿಪೇಯಿ ಕಪ್ ಕ್ರಿಕೆಟ್ ಪಂದ್ಯಾವಳಿ ಇಂದಿನಿಂದ

Last Updated 24 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಯಲಹಂಕ: ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವುದರಿಂದ ಯುವ ಸಮುದಾಯಕ್ಕೆ ಉತ್ತೇಜನ ಮತ್ತು ಪ್ರೇರಣೆ ದೊರೆಯುತ್ತದೆ. ಭವಿಷ್ಯದಲ್ಲಿ ಅವರು ಉತ್ತಮ ಕ್ರೀಡಾಪಟು ಆಗಲು ಸಹಕಾರಿಯಾಗುತ್ತದೆ ಎಂದು ಚಿತ್ರನಟ ಶಿವರಾಜಕುಮಾರ್ ಅಭಿಪ್ರಾಯಪಟ್ಟರು.

ಬಿಜೆಪಿ ಬ್ಯಾಟರಾಯನಪುರ ನಗರ ಮಂಡಲದಿಂದಥಣಿಸಂದ್ರ ಮುಖ್ಯರಸ್ತೆಯ ತಿರುಮೇನಹಳ್ಳಿಯ ಸಂಪ್ರಸಿದ್ಧಿ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಆಯೋಜಿಸಿರುವ ಎರಡು ದಿನಗಳ(ಡಿ.25 ಮತ್ತು 26) ‘ವಾಜಪೇಯಿ ಕಪ್’ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಜೆರ್ಸಿ ಬಿಡುಗಡೆ ಮಾಡಿ ಮಾತನಾಡಿದರು.

‘ಕೋವಿಡ್ ಪರಿಸ್ಥಿತಿಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಹೆದರಿಕೆಯಿತ್ತು. ಈಗ ಕೋವಿಡ್ ಪ್ರಕರಣ ಇಳಿಮುಖ ಆಗುತ್ತಿದ್ದರೂ ಜನ ಎಚ್ಚರತಪ್ಪದೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಖಡ್ಡಾಯವಾಗಿ ಪಾಲಿಸಬೇಕು’ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಕೆ.ಎ.ಮುನೀಂದ್ರಕುಮಾರ್ ಮಾತನಾಡಿ, ಪಂದ್ಯಾವಳಿಯಲ್ಲಿ 48 ತಂಡಗಳು ಪಾಲ್ಗೊಳ್ಳುತ್ತಿದ್ದು, ಆಟಗಾರರಿಗೆ 4 ಬಣ್ಣದ ಜೆರ್ಸಿ ವಿತರಿಸಲಾಗುತ್ತಿದೆ. ಪ್ರಥಮ ಬಹುಮಾನ ₹1.50 ಲಕ್ಷ, ದ್ವಿತೀಯ ₹1 ಲಕ್ಷ ಮತ್ತು ತೃತೀಯ ಬಹುಮಾನ ₹50 ಸಾವಿರ ಹಾಗೂ ಪಾರಿತೋಷಕ ವಿತರಿಸಲಾಗುವುದು. ಅಲ್ಲದೆ ಪ್ರತಿ ಪಂದ್ಯಕ್ಕೂ ‘ಪಂದ್ಯ ಪುರುಷೋತ್ತಮ’ ಹಾಗೂ ‘ಸರಣಿ ಶ್ರೇಷ್ಠ’ ಪ್ರಶಸ್ತಿ ನೀಡಲಾಗುವುದು.ಶನಿವಾರ ಬೆಳಗ್ಗೆ 10 ಗಂಟೆಗೆ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT