ಗುರುವಾರ , ನವೆಂಬರ್ 14, 2019
22 °C

ಫುಟ್‌ಬಾಲ್‌ ಟೂರ್ನಿ: ಅಚ್ಚರಿ ಮೂಡಿಸಿದ ಮಡಗಾಸ್ಕರ್‌

Published:
Updated:

ಅಲೆಕ್ಸಾಂಡ್ರಿಯಾ, ಈಜಿಪ್ಟ್‌: ಬೆರಗಾಗುವ ರೀತಿಯಲ್ಲಿ ಪ್ರದರ್ಶನ ತೋರಿರುವ ಮಡಗಾಸ್ಕರ್‌ ತಂಡ, ಆಫ್ರಿಕಾ ಕಪ್‌ ಆಫ್‌ ನೇಷನ್ಸ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ ತಲುಪಿದೆ. ಭಾನುವಾರ ನೈಜೀರಿಯಾ ಮೇಲೆ ಅಚ್ಚರಿಯ 2–0 ಜಯಗಳಿಸಿದ ಈ ತಂಡ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌಟ್‌ಗೆ ಮುನ್ನಡೆದಿದೆ.

ಪ್ರಬಲ ನೈಜೀರಿಯಾ ವಿರುದ್ಧದ ಗೆಲುವು ಟೂರ್ನಿಯ ಇತಿಹಾಸದಲ್ಲೇ ‘ಆಘಾತಕಾರಿ ಫಲಿತಾಂಶ’ ಎಂದು ಬಣ್ಣಿಸಲಾಗಿದೆ. ಮಡಗಾಸ್ಕರ್‌ ಏಳು ಪಾಯಿಂಟ್ಸ್‌ ಸಂಗ್ರಹಿಸಿತು. ಆದರೆ ಕೋಚ್‌ ನಿಖೋಲಸ್‌ ಡುಪುಯಿ ಈ ಮಾತನ್ನು ಒಪ್ಪುವುದಿಲ್ಲ.

‘ನಾವು ಆತ್ಮವಿಶ್ವಾಸದಿಂದ ಆಡಿದೆವು. ಇನ್ನು ನಾವು ಪ್ರಶಸ್ತಿ ಹಾದಿಯಲ್ಲಿ ಸಾಧ್ಯವಾದಷ್ಟು ದೂರ ಸಾಗಲು ಪ್ರಯತ್ನಿಸುತ್ತೇವೆ’ ಎಂದು ಅವರು ಹೇಳಿದರು. ನೈಜೀರಿಯಾ ತನ್ನ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯವನ್ನು ಮಂಗಳವಾರ ಆಡಲಿದೆ.

ಗಿನಿಯಾ ವಿರುದ್ಧ 2–2 ‘ಡ್ರಾ’ದೊಡನೆ ಅಭಿಯಾನ ಆರಂಭಿಸಿದ್ದ ಮಡಗಾಸ್ಕರ್‌, ಎರಡನೇ ಪಂದ್ಯದಲ್ಲಿ ಬುರುಂಡಿ ವಿರುದ್ಧ ಕೊನೆಯ ಹಂತದಲ್ಲಿ ದೊರಕಿದ ಫ್ರೀಕಿಕ್‌ ಅವಕಾಶ ಗೋಲಾಗಿ ಪರಿವರ್ತಿಸಿ ಜಯಗಳಿಸಿತ್ತು.

ಪ್ರತಿಕ್ರಿಯಿಸಿ (+)