ಕಾಶಿಮಾ, ಜಪಾನ್: ಮಹಿಳೆಯರ ಫುಟ್ಬಾಲ್ ಸ್ಪರ್ಧೆಯಲ್ಲಿ ಅಮೆರಿಕ ತಂಡ ಕಂಚಿನ ಪದಕ ಜಯಿಸಿದೆ.

ಇಬಾರಕಿ ಕಾಶಿಮಾ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಅಮೆರಿಕ 4–3 ಗೋಲುಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಅಮೆರಿಕ ತಂಡ 8ನೇ ನಿಮಷದಲ್ಲೇ ಖಾತೆ ತೆರೆಯಿತು. ಹಿರಿಯ ಆಟಗಾರ್ತಿ ಮೇಗನ್ ರಾಪಿನೊ, ಕಾರ್ನರ್ ಕಿಕ್ ಮೂಲಕ ಚೆಂಡನ್ನು ಗುರಿ ಸೇರಿಸಿದರು. 17ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ತಂಡದ ಸ್ಯಾಮ್ ಕೆರ್ ಕಾಲ್ಚಳಕ ತೋರಿದರು. ಹೀಗಾಗಿ 1–1 ಸಮಬಲ ಕಂಡುಬಂತು. ಇದರ ಬೆನ್ನಲ್ಲೇ (21) ಮತ್ತೊಂದು ಗೋಲು ಬಾರಿಸಿದ ರಾಪಿನೊ ತಂಡದ ಮುನ್ನಡೆಗೆ ಕಾರಣರಾದರು. 45+1ನೇ ನಿಮಿಷದಲ್ಲಿ ಕಾರ್ಲಿ ಲಾಯ್ಡ್ ಮಿಂಚಿದರು. ಹೀಗಾಗಿ ಅಮೆರಿಕ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿಕೊಂಡು ವಿರಾಮಕ್ಕೆ ಹೋಯಿತು. 51ನೇ ನಿಮಿಷದಲ್ಲಿ ಲಾಯ್ಡ್ ಮತ್ತೆ ಮೋಡಿ ಮಾಡಿದರು.

ನಂತರ ಆಸ್ಟ್ರೇಲಿಯಾ ಆಟಗಾರ್ತಿಯರು ಮಿಂಚಿದರು. ಕ್ಯಾಟ್ಲಿನ್ ಫೋರ್ಡ್ ಮತ್ತು ಎಮಿಲಿ ಗೀಲ್ನಿಕ್ ಕ್ರಮವಾಗಿ 54 ಮತ್ತು 90ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರೂ ತಂಡದ ಸೋಲು ತಪ್ಪಿಸಲು ಆಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.