ನವದೆಹಲಿ: ಬೆಂಗಳೂರಿನ ಆರ್ಮಿ ಸ್ಕೂಲ್ ತಂಡದವರು ಇಲ್ಲಿ ಗುರುವಾರ ಮುಕ್ತಾಯಗೊಂಡ 16 ವರ್ಷದೊಳಗಿನವರ ಬಯೇನ್ ಯೂಥ್ ಕಪ್ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಪ್ರಶಸ್ತಿ ಗೆದ್ದರು. ಅಡಿಡಾಸ್ ಕ್ರೀಡಾಂಗಣದಲ್ಲಿ ನಡೆದ ಸೆವೆನ್ ಎ ಸೈಡ್ ಟೂರ್ನಿಯ ಫೈನಲ್ನಲ್ಲಿ ಬೆಂಗಳೂರು ಬಾಲಕರು ಡಿಪಿಎಸ್ ಈಸ್ಟ್ ತಂಡವನ್ನು 2–1ರಿಂದ ಮಣಿಸಿದರು.

ದೇಶದ ಐದು ನಗರಗಳಲ್ಲಿ ನಡೆದ ಟೂರ್ನಿಯ ಪಂದ್ಯಗಳಲ್ಲಿ 250 ಶಾಲೆಗಳು ಪಾಲ್ಗೊಂಡಿದ್ದವು. ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತ ಹಾಗೂ ಇದೇ ಮೊದಲ ಬಾರಿ ಸ್ಪರ್ಧಿಸಿದ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖ್ಯ ಸುತ್ತು ಪ್ರವೇಶಿಸಿದ್ದವು. ಈ ತಂಡಗಳು ಆಯಾ ನಗರಗಳನ್ನು ಪ್ರತಿನಿಧಿಸಿದ್ದವು.

ಪ್ರಶಸ್ತಿ ಗೆದ್ದ ಬೆಂಗಳೂರು ತಂಡ ಬಯೇನ್ ಯೂಥ್ ವಿಶ್ವಕಪ್ ಫೈನಲ್ಸ್ನಲ್ಲಿ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.