ಶುಕ್ರವಾರ, ಸೆಪ್ಟೆಂಬರ್ 17, 2021
23 °C

ಎಟಿಕೆ– ರಾಯ್‌ ಕೃಷ್ಣ ಒಪ್ಪಂದ ವಿಸ್ತರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಇಂಡಿಯನ್‌ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಎಟಿಕೆ ಮೋಹನ ಬಾಗನ್ (ಎಟಿಕೆಎಂಬಿ) ತಂಡವು ರಾಯ್‌ ಕೃಷ್ಣ ಜೊತೆಗಿನ ಒಪ್ಪಂದವನ್ನು ವಿಸ್ತರಿಸಿಕೊಂಡಿದೆ.

ಕ್ಲಬ್‌ನ ‘ಮೋಹನ್ ಬಾಗನ್‌ ದಿನಾಚರಣೆ‘ಯ ದಿನವೇ ಫಿಜಿಯ ಆಟಗಾರನೊಂದಿಗಿನ ಒಪ್ಪಂದವನ್ನು ವಿಸ್ತರಿಸಲಾಗಿದೆ.

‘ವಿಶೇಷ ದಿನವೇ ಕ್ಲಬ್‌ನೊಂದಿಗೆ ಮುಂದುವರಿಯುತ್ತಿರುವ ಗೌರವ ದೊರೆತಿದೆ. ಕ್ಲಬ್‌ನ ಎಲ್ಲರ ಸಹಕಾರ ಮೊದಲಿನಂತೆಯೇ ಮುಂದುವರಿಯಲಿದೆ ಎಂಬ ವಿಶ್ವಾಸವಿದೆ‘ ಎಂದು 33 ವರ್ಷದ ಕೃಷ್ಣ ಹೇಳಿದ್ದಾರೆ.

ಎಟಿಕೆಎಂಬಿ ತಂಡವು ಮಾಲ್ಡೀವ್ಸ್‌ನಲ್ಲಿ ನಡೆಯಲಿರುವ ಎಎಫ್‌ಸಿ ಕಪ್ ಟೂರ್ನಿಗಾಗಿ ಈಗಾಗಲೇ ಸಿದ್ಧತೆಯನ್ನು ಆರಂಭಿಸಿದೆ. ಟೂರ್ನಿಯಲ್ಲಿ ಆಗಸ್ಟ್‌ 18ರಂದು ನಡೆಯುವ ‘ಡಿ’ ಗುಂಪಿನ ಪಂದ್ಯದಲ್ಲಿ, ಬೆಂಗಳೂರು ಎಫ್‌ಸಿ– ಈಗಲ್ಸ್ ಎಫ್‌ಸಿ ನಡುವಣ ವಿಜೇತರನ್ನು ಎದುರಿಸಲಿದೆ.

2019–20ರ ಋತುವಿನಲ್ಲಿ ಎಟಿಕೆ ಎಫ್‌ಸಿ ಪರ 15 ಗೋಲು ದಾಖಲಿಸಿದ್ದ ಕೃಷ್ಣ, ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಋತುವಿನಲ್ಲಿ ಕೃಷ್ಣ 23 ಪಂದ್ಯಗಳಲ್ಲಿ 22 ಗೋಲುಗಳನ್ನು ಹೊಡೆದು ‘ಚಿನ್ನದ ಚೆಂಡು‘ ಗೌರವಕ್ಕೆ ಭಾಜನರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು