ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಸಿ ಬೆಂಗಳೂರು ತಂಡಕ್ಕೆ ಗೆಲುವು

Last Updated 11 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಸೂಪರ್ ಲೀಗ್ ಟೂರ್ನಿಯ ಗುರುವಾರದ ಪಂದ್ಯಗಳಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ ಮತ್ತು ಸ್ಟೂಡೆಂಟ್ಸ್‌ ಯೂನಿಯನ್ ಎಫ್‌ಸಿ ತಂಡಗಳು ಜಯ ಗಳಿಸಿದವು. ಎಫ್‌ಸಿ ಡೆಕ್ಕನ್ ಎದುರಿನ ಪಂದ್ಯದಲ್ಲಿ ರಾಬರ್ಟ್ ಜೂನಿಯರ್ ಪ್ರೈಮಸ್ ನಾಲ್ಕನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಎಫ್‌ಸಿ ಬೆಂಗಳೂರು 1–0ರಲ್ಲಿ ಜಯ ಗಳಿಸಿತು.

ವಿಘ್ನೇಶ್ ಶ್ರೀನಿವಾಸ್ (4ನೇ ನಿಮಿಷ) ಮತ್ತು ಟೈಕಿ ಯೆಸ್ಡಿಡಾ (25ನೇ ನಿ) ಗಳಿಸಿದ ಗೋಲುಗಳ ನೆರವಿನಿಂದ ಸ್ಟೂಡೆಂಟ್ಸ್ ಯೂನಿಯನ್ 2–1ರಲ್ಲಿ ಬೆಂಗಳೂರು ಡ್ರೀಮ್ ಯುನೈಟೆಡ್‌ ಎಫ್‌ಸಿಯನ್ನು ಸೋಲಿಸಿತು. ಡ್ರೀಮ್ ಯುನೈಟೆಡ್‌ಗಾಗಿ ದೊರ್ಜಿ (29ನೇ ನಿ) ಗೋಲು ಗಳಿಸಿದರು.

ಶುಕ್ರವಾರ ಮಧ್ಯಾಹ್ನ 1.30ಕ್ಕೆ ಕಿಕ್‌ಸ್ಟಾರ್ಟ್‌ ಎಫ್‌ಸಿ ಮತ್ತು ಎಎಸ್‌ಸಿ–ಸೆಂಟರ್ ಎಫ್‌ಸಿ ತಂಡಗಳು ಸೆಣಸಲಿದ್ದು 3.30ಕ್ಕೆ ಯಂಗ್ ಚಾಲೆಂಜರ್ಸ್‌ ಎಫ್‌ಸಿ ಮತ್ತು ಎಂಇಜಿ ಆ್ಯಂಡ್ ಸೆಂಟರ್ ಎಫ್‌ಸಿ ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT