ಬಿ ಡಿವಿಷನ್ ಫುಟ್‌ಬಾಲ್‌ ಲೀಗ್‌ ಇಂದಿನಿಂದ

7

ಬಿ ಡಿವಿಷನ್ ಫುಟ್‌ಬಾಲ್‌ ಲೀಗ್‌ ಇಂದಿನಿಂದ

Published:
Updated:

ಬೆಂಗಳೂರು: ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ರಿಡಾಂಗಣದಲ್ಲಿ ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಆಶ್ರಯದ ‘ಬಿ’ ಡಿವಿಷನ್‌ ಫುಟ್‌ಬಾಲ್ ಲೀಗ್‌ ಭಾನುವಾರ ಆರಂಭವಾಗಲಿದೆ. ಪ್ರತಿ ದಿನ ಮಧ್ಯಾಹ್ನ 1.45 ಮತ್ತು 3.30ಕ್ಕೆ ಪಂದ್ಯಗಳು ಆರಂಭವಾಗಲಿವೆ.

ಮೊದಲ ದಿನ ‘ಎ’ ಗುಂಪಿನಲ್ಲಿ ಬೆಂಗಳೂರು ಮಾರ್ಸ್‌ ಎಫ್‌ಸಿ–ಬಿಟಿಎಂ ಎಫ್‌ಸಿ ಮತ್ತು ಬ್ಲಿಟ್ಜ್‌ ಎಫ್‌ಸಿ–ಎಕ್ಸ್‌ಎಲ್‌ಆರ್‌8 ಎಫ್‌ಸಿ ನಡುವೆ ಹಣಾಹಣಿ ನಡೆಯಲಿದೆ.

‘ಎ’ ಗುಂಪಿನಲ್ಲಿ ಬೆಂಗಳೂರು ಮಾರ್ಸ್ ಎಫ್‌ಸಿ, ಬಿಟಿಎಂ ಎಫ್‌ಸಿ, ಎಕ್ಸ್‌ಎಲ್‌ಆರ್‌8 ಎಫ್‌ಸಿ, ಗೋವನ್ಸ್ ಎಫ್‌ಸಿ, ತಿಲಕ್ ಮೆಮೋರಿಯಲ್ ಎಫ್‌ಸಿ, ಬ್ಲಿಟ್ಜ್‌ ಎಫ್‌ಸಿ ಮತ್ತು ಸಾಯಿ ತಂಡಗಳು ಇವೆ. ‘ಬಿ’ ಗುಂಪಿನಲ್ಲಿ ಶ್ರೀ ಗಜಾನನ ಎಫ್‌ಸಿ, ಬೆಂಗಳೂರು ಗನ್ನರ್ಸ್ ಎಫ್‌ಸಿ, ಸೌತ್ ಇಂಡಿಯಾ ಎಫ್‌ಸಿ, ಸನ್‌ರೈಸ್ ಎಫ್‌ಸಿ, ಬಾಷ್ ಎಫ್‌ಸಿ, ರಾಯಲ್ಸ್ ಎಫ್‌ಸಿ ಮತ್ತು ವೆಹಿಕಲ್ಸ್ ಎಫ್‌ಸಿ ತಂಡಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !