ಬೆಂಗಳೂರು: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್‌ಬಾಲ್ ಫ್ರಾಂಚೈಸ್ ಬೆಂಗಳೂರು ಎಫ್‌ಸಿಯು ಯುವ ಆಟಗಾರ ಹರ್ಮನ್‌ಪ್ರೀತ್ ಸಿಂಗ್ ಅವರೊಂದಿಗೆ ಭಾನುವಾರ ಒಪ್ಪಂದ ಮಾಡಿಕೊಂಡಿದೆ.
ಈಸ್ಟ್ ಬೆಂಗಾಲ್ ಮತ್ತು ಯುನೈಟೆಡ್ ಪಂಜಾಬ್ ಎಫ್‌ಸಿ ತಂಡಗಳಲ್ಲಿ ಆಡಿದ್ದ 19 ವರ್ಷದ ಹರ್ಮನ್‌ಪ್ರೀತ್, ಫ್ರೀ ಟ್ರಾನ್ಸ್‌ಫರ್ ಆಧಾರದಲ್ಲಿ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಸೇರಿದ್ದಾರೆ.
‘ಬೆಂಗಳೂರು ಎಫ್‌ಸಿ ಯಶಸ್ವಿ ಕ್ಲಬ್ ಆಗಿದೆ. ಆಟಗಾರರ ವಯಸ್ಸನ್ನು ಪರಿಗಣಿಸದೆ ಅವರ ಮೇಲೆ ವಿಶ್ವಾಸವಿರಿಸುತ್ತದೆ. ದೇಶದ ಅತ್ಯಂತ ಅನುಭವಿ ಆಟಗಾರರಾದ ಸುನಿಲ್ ಭಾಯ್ (ಸುನಿಲ್ ಚೆಟ್ರಿ) ಮತ್ತು ಗುರುಪ್ರೀತ್ ಭಾಯ್ ಅವರಿಂದ ಕಲಿತುಕೊಳ್ಳಲು ಕಾತರನಾಗಿದ್ದೇನೆ. ತಂಡದ ಪರವಾಗಿ ಶ್ರೇಷ್ಠ ಆಟವಾಡಲು ಬಯಸುತ್ತೇನೆ’ ಎಂದು ಹರ್ಮನ್‌ಪ್ರೀತ್ ಹೇಳಿದ್ದಾರೆ.
ಹರ್ಮನ್‌ಪ್ರೀತ್ ಅವರ ತಂದೆ ಸತ್ನಾಂ ಸಿಂಗ್ ಪಂಜಾಬ್ ಪೊಲೀಸ್ ಪರ ಆಡಿದ್ದರು. ಅವರ ಚಿಕ್ಕಪ್ಪ ಕೂಡ ಫುಟ್‌ಬಾಲ್ ಆಟಗಾರ ಆಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.