ಕೋಲ್ಕತ್ತ: ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡವು ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಜಯದೊಂದಿಗೆ ತನ್ನ ಅಭಿಯಾನ ಆರಂಭಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಬಿಎಫ್ಸಿಯು 2–0ಯಿಂದ ಕೇರಳ ಬ್ಲಾಸ್ಟರ್ಸ್ ವಿರುದ್ಧ ಜಯಿಸಿತು.

ನಮಗ್ಯಾಲ್ ಭುಟಿಯಾ (45ನೇ ನಿ) ಮತ್ತು ಲಿಯೊನ್ ಆಗಸ್ಟಿನ್ (71 ನೇ ನಿ) ಹೊಡೆದ ಗೋಲುಗಳಿಂದಾಗಿ ಬಿಎಫ್ಸಿ ಜಯ ಸಾಧ್ಯವಾಯಿತು.

ಕೇರಳ ತಂಡವು ಪಂದ್ಯದ ಆರಂಭದಲ್ಲಿ ಉತ್ತಮವಾಗಿ ಆಡಿತು. ಮೊದಲಾರ್ಧದ ಬಹುತೇಕ ಅವಧಿಯಲ್ಲಿ ಬಿಗಿಹಿಡಿತ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಬಿಎಫ್ಸಿ ತಂಡವು ಪುಟಿದೆದ್ದಿತು.

ಆಕ್ರಮಣಶೈಲಿಯ ಆಟದೊಂದಿಗೆ ಗೋಲು ವಲಯದಲ್ಲಿ ಪದೇ ಪದೇ ಲಗ್ಗೆ ಹಾಕಿತು. 45ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್ನಲ್ಲಿ ನಮಗ್ಯಾಲ್ ಭುಟಿಯಾ ಅವರ ಮಿಂಚಿನ ಆಟದ ಮುಂದೆ ಕೇರಳ ತಂಡದ ಗೋಲ್ ಕೀಪರ್ ಅಲ್ಬಿನೊ ಗೋಮ್ಸ್ ಅಸಹಾಯಕರಾದರು. ಬಿಎಫ್ಸಿ 1–0 ಮುನ್ಡಡೆ ಪಡೆಯಿತು. 71ನೇ ನಿಮಿಷದವರೆಗೂ ಈ ಅಂತರ ಕಾಯ್ದುಕೊಂಡ ತಂಡಕ್ಕೆ ಲಿಯೊನ್ ಎರಡನೇ ಗೋಲಿನ ಕಾಣಿಕೆ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.