ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ಲೀಗ್: ಎಫ್‌ಸಿಬಿ ಯುನೈಟೆಡ್‌ಗೆ ಗೆಲುವಿನ ‘ಡಬಲ್‌’

ಕಿಕ್‌ಸ್ಟಾರ್ಟ್‌ಗೆ ಭರ್ಜರಿ ಜಯ
Last Updated 24 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್‌ನಲ್ಲಿ ಶುಕ್ರವಾರ ಗೆಲುವಿನ ‘ಡಬಲ್’ ಸಾಧನೆ ಮಾಡಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ 3–0ಯಿಂದ ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿಯನ್ನು ಮತ್ತು 6–0ಯಿಂದ ಎಡಿಇಎಫ್‌ಸಿಯನ್ನು ಮಣಿಸಿತು. ‌

ನಟ ಪುನೀತ್ ರಾಜ್‌ಕುಮಾರ್ ಅವರ ನಿಧನದಿಂದಾಗಿ ಅಕ್ಟೋಬರ್ 29ರಂದು ಬೆಂಗಳೂರು ಯುನೈಟೆಡ್ ಹಾಗೂ ಇಂಡಿಪೆಂಡೆನ್ಸ್ ನಡುವಿನ ಪಂದ್ಯವನ್ನು 70ನೇ ನಿಮಿಷದಲ್ಲಿ ಸ್ಥಗಿತಗೊಳಿಸಲಾಗಿತ್ತು. ಆ ಪಂದ್ಯವನ್ನು ಶುಕ್ರವಾರ ಮುಂದುವರಿಸಲಾಯಿತು. ಪಂದ್ಯ ನಿಂತಾಗ 2–0 ಮುನ್ನಡೆಯಲ್ಲಿದ್ದ ತಂಡ ಶುಕ್ರವಾರ 20 ನಿಮಿಷಗಳ ಪಂದ್ಯದಲ್ಲಿ ಮತ್ತೊಂದು ಗೋಲು ಗಳಿಸಿತು. ರೊನಾಲ್ಡೊ ಆಗಸ್ಟೊ ಆ್ಯಂಟೊನಿಯೊ (11ನೇ ನಿಮಿಷ). ಲೂಕ್‌ ಮಜೆಸೆನ್ (19ನೇ ನಿ) ಮತ್ತು ಮೊಹಮ್ಮದ್ ರೆಹಬರ್‌ (88ನೇ ನಿ) ಗೋಲು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ರೊನಾಲ್ಡೊ ಆಗಸ್ಟೊ (8, 68ನೇ ನಿ), ಥೋಕೊಮ್ ಜೇಮ್ಸ್‌ ಸಿಂಗ್ (44ನೇ ನಿ), ಮೊಹಮ್ಮದ್ ರೆಹಬರ್ (70ನೇ ನಿ) ಮತ್ತು ನಿಹಾಲ್ ಕೊಲ್ಯಾಕೊ (83, 90+2ನೇ ನಿ) ಗೋಲು ಗಳಿಸಿದರು.

ಕಿಕ್‌ಸ್ಟಾರ್ಟ್‌ಗೆ ಮಣಿದ ಎಂಇಜಿ
ಇದೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರಿನ್ಸ್‌ವಿಲ್‌ ಮತ್ತುಅಂಕಿತ್ ಅವರ ಹ್ಯಾಟ್ರಿಕ್‌ ನೆರವಿನಿಂದ ಕಿಕ್‌ ಸ್ಟಾರ್ಟ್‌ ಎಫ್‌ಸಿ 9–1ರಲ್ಲಿ ಎಂಇಜಿ–ಸೆಂಟರ್ ವಿರುದ್ಧ ಗೆಲುವು ಸಾಧಿಸಿತು. ಕಿಕ್‌ಸ್ಟಾರ್ಟ್‌ಗಾಗಿ ಪ್ರಿನ್ಸ್‌ವಿಲ್‌ ಎಮಕ (7, 54, 75 ಮತ್ತು 81ನೇ ನಿ), ಸುಧೀರ್ ಕೋಟಿಕೇಳ (40, 72ನೇ ನಿ), ಅಂಕಿತ್ (43, 45 ಮತ್ತು 68ನೇ ನಿ) ಗೋಲು ಗಳಿಸಿದರು. ಎಂಇಜಿ ತಂಡದ ಏಕೈಕ ಗೋಲು ಗಳಿಸಿದವರು ರಾಹುಲ್ ರಾಮಕೃಷ್ಣ (49ನೇ ನಿ).

ಬೆಂಗಳೂರು ಈಗಲ್ಸ್‌ 4–1ರಲ್ಲಿ ಎಫ್‌ಸಿ ಡೆಕ್ಕನ್ ತಂಡವನ್ನು ಸೋಲಿಸಿತು. ದೊರ್ಜಿ (3ನೇ ನಿ) ವಿಜಯ್‌ ತಂಗವೇಲು (16ನೇ ನಿ), ಅಪ್ಪು (45+1ನೇ ನಿ) ಮತ್ತು ಆ್ಯಶ್ಲಿ (90+2ನೇ ನಿ) ಈಗಲ್ಸ್‌ಗಾಗಿ ಗೋಲು ಗಳಿಸಿದರೆ ಡೆಕ್ಕನ್‌ ಪರವಾಗಿ ಫೆಬಿನ್ ದಾಸ್ (15ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT