ಶುಕ್ರವಾರ, ಏಪ್ರಿಲ್ 3, 2020
19 °C

ಫುಟ್‌ಬಾಲ್: ಗೋವನ್ಸ್ ಎಫ್‌ಸಿಗೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎದುರಾಳಿಗಳನ್ನು ಕಂಗೆಡಿಸಿದ ಗೋವನ್ಸ್ ಕ್ಲಬ್ ತಂಡ ಬಿಡಿಎಫ್ಎ ‘ಬಿ’ ಡಿವಿಷನ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿತು. ಹಲಸೂರಿನ ಸೌತ್ ಯುನೈಟೆಡ್ ಎಫ್‌ಸಿ ಅಕಾಡೆಮಿ ಮೈದಾನದಲ್ಲಿ ಗುರುವಾರ ನಡೆದ ’ಎ’ ಗುಂಪಿನ ಪಂದ್ಯದಲ್ಲಿ ತಿಲಕ್ ಮೆಮೋರಿಯಲ್ ಎಫ್‌ಸಿಯನ್ನು ಗೋವನ್ಸ್‌ 8–0ಯಿಂದ ಮಣಿಸಿತು.

ರೋಜೆನ್ ಸಿಂಗ್‌ (13, 52ನೇ ನಿಮಿಷ) ಮತ್ತು ಸುಂದರ್ ಸಿಂಗ್ (69, 70ನೇ ನಿ) ಎರಡು ಗೋಲುಗಳೊಂದಿಗೆ ಮಿಂಚಿದರೆ ರೋಹನ್ ಸಿಂಗ್ (19ನೇ ನಿ), ರಾಬರ್ಟ್ಸನ್ (37ನೇ ನಿ), ಚಿತ್ತರಂಜನ್ (47ನೇ ನಿ), ರಾಘವೇಂದ್ರ (49ನೇ ನಿ) ತಲಾ ಒಂದೊಂದು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು.

ಮತ್ತೊಂದು ಪಂದ್ಯದಲ್ಲಿ ವೆಹಿಕಲ್ಸ್ ಎಫ್‌ಸಿ ಮತ್ತು ಸೌತ್ ಇಂಡಿಯಾ ಎಫ್‌ಸಿ 1–1ರ ಡ್ರಾ ಸಾಧಿಸಿತು. ಸೌತ್ ಇಂಡಿಯಾ ಪರ ಹೇಮಂತ್ (30ನೇ ನಿ) ಮತ್ತು ವೆಹಿಕಲ್ಸ್ ಪರ ಸಂತೋಷ್ (33ನೇ ನಿ) ಗೋಲು ಗಳಿಸಿದರು. 

ಶುಕ್ರವಾರದಿಂದ ಅನಿರ್ದಿಷ್ಟ ಕಾಲದ ವರೆಗೆ ಪಂದ್ಯಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು