ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪಾ ಅಮೆರಿಕದ ಫುಟ್‌ಬಾಲ್‌: ವೆನೆಜುಯೇಲಾಕ್ಕೆ ಮಣಿದ ಇಕ್ವೆಡೊರ್

Published 23 ಜೂನ್ 2024, 19:30 IST
Last Updated 23 ಜೂನ್ 2024, 19:30 IST
ಅಕ್ಷರ ಗಾತ್ರ

ಸಾಂತಾ ಕ್ಲಾರಾ (ಅಮೆರಿಕ): ಮಧ್ಯಂತರದ ನಂತರ ಝೊಂಡರ್ ಕಾಡಿಝ್ ಮತ್ತು ಎಡ್ವಡ್‌ ಬೆಲ್ಲೊ ಗಳಿಸಿದ ಗೋಲುಗಳ ನೆರವಿನಿಂದ ವೆನೆಜುಯೇಲಾ ತಂಡವು ಹಿನ್ನಡೆಯಿಂದ ಚೇತರಿಸಿ 2–1 ಗೋಲುಗಳಿಂದ ಇಕ್ವೆಡೊರ್ ತಂಡವನ್ನು ಮಣಿಸಿತು. ಭಾನುವಾರ ನಡೆದ ಕೊಪಾ ಅಮೆರಿಕ ‘ಬಿ’ ಗುಂಪಿನ ಈ ಪಂದ್ಯದಲ್ಲಿ ಇಕ್ವೆಡೊರ್‌ ಹೆಚ್ಚಿನ ಅವಧಿಯಲ್ಲಿ 10 ಮಂದಿಯೊಡನೆ ಆಡಬೇಕಾಯಿತು.

ಈಕ್ವಡೊರ್ ತಂಡದ ದಾಳಿಯ ಮುಂಚೂಣಿಯಲ್ಲಿರಬೇಕಾಗಿದ್ದ ಎನ್ನರ್ ವಲೆನ್ಸಿಯಾ ಅವರಿಗೆ 22 ನಿಮಿಷ ಕೆಂಪುಕಾರ್ಡ್ ದರ್ಶನವಾಗಿ ಪಂದ್ಯದಿಂದ ಹೊರನಡೆಯಬೇಕಾಯಿತು.

ಆದರೆ 40ನೇ ನಿಮಿಷ ಇಕ್ವೆಡೊರ್‌ ತಂಡವೇ ಮುನ್ನಡೆ ಸಾಧಿಸಿತು. ಕೆಂಡ್ರಿ ಪೇಝ್ ಅವರು ಫ್ರೀಕಿಕ್‌ನಲ್ಲಿ ಒದ್ದ ಚೆಂಡನ್ನು ವೆನೆಜುಯೇಲಾ ರಕ್ಷಣೆ ಆಟಗಾರರು ಸರಿಯಾಗಿ ದೂರಕ್ಕೆ ಕಳಿಸದ ಕಾರಣ ದೊರೆತ ಅವಕಾಶವನ್ನು ಜೆರೆಮಿ ಸರ್ಮೀಂಟೊ ಗೋಲಾಗಿ ಪರಿವರ್ತಿಸಿದರು.

64ನೇ ನಿಮಿಷ ಕಾಡಿಝ್ 15 ಗಜ ದೂರದಿಂದ ಒದ್ದ ಚೆಂಡು ಸೀದಾ ಗೋಳಿನೊಳಕ್ಕೆ ಹೋಯಿತು. ಬೆಲ್ಲೊ ಅವರು 74ನೇ ನಿಮಿಷ ವೆನೆಜುಯೇಲಾ ತಂಡದ ಗೆಲುವಿನ ಅಂತರ ಹೆಚ್ಚಿಸಿದರು.

30ನೇ ಕ್ರಮಾಂಕದಲ್ಲಿರುವ ಇಕ್ವೆಡೊರ್ ಬುಧವಾರ ಲಾಸ್‌ವೇಗಸ್‌ನಲ್ಲಿ ನಡೆಯುವ ಪಂದ್ಯದಲ್ಲಿ ಜಮೈಕಾ ತಂಡವನ್ನು ಎದುರಿಸಲಿದೆ. 54ನೇ ಕ್ರಮಾಂಕದ ವೆನೆಜುಯೇಲಾ ಅದೇ ದಿನ ಕೆಲಿಫೋರ್ನಿಯಾದ ಇಂಗೆಲ್‌ವುಡ್‌ನಲ್ಲಿ ನಡೆಯುವ ಪಂದ್ಯದಲ್ಲಿ ಮೆಕ್ಸಿಕೊ ತಂಡದ ಜೊತೆ ಆಡಲಿದೆ.

ಇಕ್ವೆಡೊರ್‌, ವೆನೆಜುಯೇಲಾ ವಿರುದ್ಧ ಆಡಿರುವ ಕೊನೆಯ 10 ಪಂದ್ಯಗಳಲ್ಲಿ ಎರಡನೇ ಸಾರಿ ಸೋತಂತಾಗಿದೆ. 2011ರ ಕೊಪಾ ಅಮೆರಿಕಾ ಟೂರ್ನಿಯಲ್ಲಿ ಕೊನೆಯ ಬಾರಿ ವೆನೆಜುಯೇಲಾ, ಇಕ್ವೆಡೊರ್ ಎದುರು ಜಯಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT