ಉತ್ತರಾಖಂಡದಲ್ಲಿ ಮೇಘ ಸ್ಫೋಟ: ಅಣೆಕಟ್ಟೆಗೆ ಹಾನಿ; ಗ್ರಾಮಕ್ಕೆ ನುಗ್ಗಿದ ನೀರು

7

ಉತ್ತರಾಖಂಡದಲ್ಲಿ ಮೇಘ ಸ್ಫೋಟ: ಅಣೆಕಟ್ಟೆಗೆ ಹಾನಿ; ಗ್ರಾಮಕ್ಕೆ ನುಗ್ಗಿದ ನೀರು

Published:
Updated:
ಉತ್ತರಾಖಂಡದಲ್ಲಿ ಮೇಘ ಸ್ಫೋಟದಿಂದ ಭಾರಿ ಸುರಿಯುತ್ತಿದ್ದು, ಮುನಸ್ಯಾರ ಗ್ರಾಮದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ

ಪಿಥೌರಗಡ: ಸೋಮವಾರ ಬೆಳಿಗ್ಗೆ ಮೇಘ ಸ್ಫೋಟದಿಂದ ಉತ್ತರಾಖಂಡದ ಮುನಸ್ಯಾರಿ ಬಂಗಾಪಾನಿ ಮತ್ತು ಧಾರ್‌ಚುಲಾದಲ್ಲಿ ಭಾರಿ ಮಳೆಯಾಗಿದ್ದು, ಸೆರಾಘಾಟ್ ಜಲವಿದ್ಯುತ್‌ ಯೋಜನೆ ಅಣೆಕಟ್ಟೆಗೆ ಹಾನಿಯಾಗಿದೆ.

ಅಣೆಕಟ್ಟೆ ಒಡೆದು ಹರಿಯುತ್ತಿರುವ ನೀರು ಮುನಸ್ಯಾರಿ ಗ್ರಾಮದಲ್ಲಿ ಮುಳಗಡೆಯ ಭೀತಿ ಸೃಷ್ಟಿಸಿದೆ. ಜನರು ಎತ್ತರದ ಸ್ಥಳಗಳಲ್ಲಿ ನಿಂತು ರಕ್ಷಣೆ ಪಡೆಯುತ್ತಿದ್ದು, ಪ್ರಾಣ ಹಾನಿ ಕುರಿತು ಈವರೆಗೆ ವರದಿಯಾಗಿಲ್ಲ.

ಭಾನುವಾರ ರಾತ್ರಿಯಿಂದ ಮಳೆ ಸುರಿಯುತ್ತಲೇ ಇರುವುದರಿಂದ ನೀರಿನ ರಭಸ ಹೆಚ್ಚಿದ್ದು, ಪ್ರವಾಹ ಸ್ಥಿತಿ ಉಂಟಾಗಿದೆ. ಮಣ್ಣಿನ ಸಮೇತ ಮಾರುಕಟ್ಟೆ ಪ್ರವೇಶಕ್ಕೆ ನೀರು ನುಗ್ಗಿದ ಕಾರಣ ಕಟ್ಟಡಗಳಿಗೂ ಹಾನಿಯಾಗಿದೆ. 

ಸರ್ಕಾರಿ ಕಚೇರಿ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ತೆರೆಯದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸೂಚನೆ ನೀಡಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !