ಶುಕ್ರವಾರ, ಜನವರಿ 24, 2020
17 °C

ಕ್ರಿಸ್ಟಿಯಾನೊ ಕಾಲ್ಚಳಕ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕ್ರಿಸ್ಟಿಯಾನೊ ರೊನಾಲ್ಡೊ ಚೆಂಡಿನೊಂದಿಗೆ ಮುನ್ನುಗ್ಗಿದ ಕ್ಷಣ –ಎಎಫ್‌ಪಿ ಚಿತ್ರ

ಮಿಲಾನ್‌: ಪೋರ್ಚುಗಲ್‌ನ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಭಾನುವಾರ ರಾತ್ರಿ ಇಲ್ಲಿನ ಅಲೆಯನ್ಸ್‌ ಕ್ರೀಡಾಂಗಣದಲ್ಲಿ ಮೋಡಿ ಮಾಡಿದರು.

ರೊನಾಲ್ಡೊ ಗಳಿಸಿದ ಎರಡು ಗೋಲುಗಳ ಬಲದಿಂದ ಯುವೆಂಟಸ್‌ ತಂಡ ಸೀರಿ ‘ಎ’ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 3–1 ಗೋಲುಗಳಿಂದ ಉಡಿನೆಸ್‌ ತಂಡವನ್ನು ಮಣಿಸಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 39ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿತು. ಇಂಟರ್‌ ಮಿಲಾನ್‌ ತಂಡ ಕೂಡ 16 ಪಂದ್ಯಗಳಿಂದ ಇಷ್ಟೇ ಪಾಯಿಂಟ್ಸ್‌ ಗಳಿಸಿದೆ.

ರೊನಾಲ್ಡೊ ಅವರು 9 ಮತ್ತು 37ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿ ಅಭಿಮಾನಿಗಳನ್ನು ರಂಜಿಸಿದರು. 45ನೇ ನಿಮಿಷದಲ್ಲಿ ಲಿಯೊನಾರ್ಡೊ ಬೋನುಕಿ ಚೆಂಡನ್ನು ಗುರಿ ಮುಟ್ಟಿಸಿದ್ದರಿಂದ ಯುವೆಂಟಸ್‌ 3–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲಿ ಉಡಿನೆಸ್‌ ತಂಡ ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡಿತು. ಈ ತಂಡದ ಇಗ್ನಾಷಿಯೊ ಪುಸೆಟ್ಟೊ ಅವರು ಹೆಚ್ಚುವರಿ ಅವಧಿಯಲ್ಲಿ (90+4ನೇ ನಿಮಿಷ) ಗೋಲು ಬಾರಿಸಿ ಹಿನ್ನಡೆ ತಗ್ಗಿಸಲಷ್ಟೇ ಶಕ್ತರಾದರು.

ಇನ್ನೊಂದು ಪಂದ್ಯದಲ್ಲಿ ರೋಮಾ 3–1 ಗೋಲುಗಳಿಂದ ಎಸ್‌.ಪಿ.ಎ.ಎಲ್‌. ವಿರುದ್ಧ ಜಯಿಸಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು