ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಡ್ಯಾನಿಯಲ್ ಹ್ಯಾಟ್ರಿಕ್ ಗೋಲು

Last Updated 8 ಏಪ್ರಿಲ್ 2022, 21:02 IST
ಅಕ್ಷರ ಗಾತ್ರ

ಬೆಂಗಳೂರು: ಡ್ಯಾನಿಯಲ್ ಗಳಿಸಿದ ಹ್ಯಾಟ್ರಿಕ್ ಗೋಲುಗಳು ಟೌನ್‌ ಎಸ್‌ಸಿ ಹೊಸಕೋಟೆ ಎಫ್‌ಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿತು. ಶುಕ್ರವಾರ ನಡೆದ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ‘ಸಿ’ ಡಿವಿಷನ್ ಲೀಗ್‌ ಟೂರ್ನಿಯ ‘ಇ’ ಗುಂಪಿನ ಪಂದ್ಯದಲ್ಲಿ ಟೌನ್ ಎಸ್‌ಸಿ 7–0ಯಿಂದ ವೇಲು ಸೋಷಿಯಲ್ಸ್ ಎಫ್‌ಸಿಯನ್ನು ಮಣಿಸಿತು.

ಚೇತನ್ 5ನೇ ನಿಮಿಷದಲ್ಲಿ ಗಳಿಸಿದ ಗೋಲಿನೊಂದಿಗೆ ತಂಡ ಮುನ್ನಡೆ ಗಳಿಸಿತು. 27 ಮತ್ತು 60ನೇ ನಿಮಿಷಗಳಲ್ಲಿ ಇಮ್ರಾನ್ ಗೋಲು ಗಳಿಸಿದರು. ಡ್ಯಾನಿಯಲ್ 42, 44 ಮತ್ತು 54ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರೆ ಅಲ್ಫಾಜ್ 45ನೇ ನಿಮಿಷದಲ್ಲಿ ಗುರಿ ಕಂಡರು.

‘ಪಿ’ ಗುಂಪಿನ ಪಂದ್ಯದಲ್ಲಿ ವೆಟೆರನ್ಸ್ ಎಫ್‌ಸಿ 2–0ಯಿಂದ ಬೆಂಗಳೂರು ಕಿಕ್ಕರ್ಸ್ ಎಫ್‌ಸಿಯನ್ನು ಮಣಿಸಿತು. ಲೂರ್ದ್ ಲಾರೆನ್ಸ್‌ (41ನೇ ನಿಮಿಷ), ಸುಮನ್ (49ನೇ ನಿ) ಗೋಲು ಗಳಿಸಿದರು. ಲಾ ಮಸಿಯಾ ಮತ್ತು ಬೆಂಟೆಕ್ಸ್ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತು.

‘ಬಿ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಬ್ಲೂಸ್ ಎಫ್‌ಸಿ 5–0ಯಿಂದ ಇಂಡಿಯನ್ ಟೊಬ್ಯಾಕೊ ಕಂಪನಿ ಎಫ್‌ಸಿಯನ್ನು ಸೋಲಿಸಿತು. ದೀಪಮ್ (17, 25ನೇ ನಿ), ಕರಣ್ (27ನೇ ನಿ), ಶಶಿಧರ (50ನೆ ನಿ) ಮತ್ತು ವಿಶ್ವನಾಥನ್ (55ನೇ ನಿ) ಯಶಸ್ಸು ಕಂಡರು. ಫ್ರೀಡಂ ಎಫ್‌ಸಿ 4–0ಯಿಂದ ನೇತಾಜಿ ಎಫ್‌ಸಿ ವಿರುದ್ಧ ಗೆದ್ದಿತು. ಅಭಿಷೇಕ್ (10, 17ನೇ ನಿ), ಚೇತನ್ (11, 23ನೇ ನಿ) ಗೋಲು ಗಳಿಸಿದರು.

‘ಇ’ ಗುಂಪಿನಲ್ಲಿ ವಿನಾಯಕ ಎಫ್‌ಸಿ 3–1ರಲ್ಲಿ ಬೆಂಗಳೂರು ಯೆಲ್ಲೋಸ್‌ ವಿರುದ್ಧ ಜಯ ಗಳಿಸಿತು. ವಿನಾಯಕ ಪರವಾಗಿ ಅರವಿಂದ (6, 17ನೇ ನಿ) ಮತ್ತು ಸಂದೀಪ್ (24ನೇ ನಿ) ಮತ್ತು ಯೆಲ್ಲೋಸ್‌ಗಾಗಿ ಋತಿಕ್ ಭಂಡಾರಿ (12ನೇ ನಿ) ಗೋಲು ಗಳಿಸಿದರು.

‘ಎನ್‌’ ಗುಂಪಿನಲ್ಲಿ ಜೋಗೊ ಒನಿಟೊ ಸಾಕರ್ ಎಫ್‌ಸಿ 1–0ಯಿಂದ ಕಮ್ಮನಹಳ್ಳಿ ಎಫ್‌ಸಿಯನ್ನು ಮಣಿಸಿತು. ಸುನಿಲ್‌ ಸಾವಿಯೊ (7ನೇ ನಿ) ಗೋಲು ಗಳಿಸಿದರು. ವಿಕ್ಟೋರಿಯಾ ಎಫ್‌ಸಿ 4–0ಯಿಂದ ಕ್ರಿಸ್ಟಲ್ ಎಫ್‌ಸಿಯನ್ನು ಸೋಲಿಸಿತು. ಆದಿತ್ಯ (9, 22ನೇ ನಿ) ಮತ್ತು ದರ್ಶನ್ (37, 39ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT