ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಮ್‌ ಬ್ಯಾಂಡ್‌ ಧರಿಸದಿರಲು ನಿರ್ಧಾರ

Last Updated 21 ನವೆಂಬರ್ 2022, 17:30 IST
ಅಕ್ಷರ ಗಾತ್ರ

ದೋಹಾ (ರಾಯಿಟರ್ಸ್‌): ಫಿಫಾ ಒತ್ತಡಕ್ಕೆ ಮಣಿದಿರುವ ಯೂರೋಪ್‌ನ ಏಳು ತಂಡಗಳು, ವಿಶ್ವಕಪ್‌ ಪಂದ್ಯದ ವೇಳೆ ತಮ್ಮ ತಂಡದ ನಾಯಕರು ‘ಒನ್‌ ಲವ್’ ಆರ್ಮ್‌ಬ್ಯಾಂಡ್‌ ಧರಿಸುವ ನಿರ್ಧಾರ ಕೈಬಿಟ್ಟಿದ್ದಾರೆ.

ಸಲಿಂಗಿಗಳು ಮತ್ತು ಎಲ್‌ಜಿಬಿಟಿ ಸಮುದಾಯಗಳಿಗೆ ಬೆಂಬಲ ಸೂಚಿಸಲು ತಮ್ಮ ತಂಡದ ನಾಯಕರು ಆರ್ಮ್‌ ಬ್ಯಾಂಡ್‌ ಧರಿಸಿ ಆಡುವರು ಎಂದು ಇಂಗ್ಲೆಂಡ್, ವೇಲ್ಸ್‌, ಬೆಲ್ಜಿಯಂ, ನೆದರ್ಲೆಂಡ್ಸ್‌, ಸ್ವಿಟ್ಜರ್‌ಲೆಂಡ್‌, ಜರ್ಮನಿ ಮತ್ತು ಡೆನ್ಮಾರ್ಕ್‌ ತಂಡಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದವು.

ಕತಾರ್‌ನಲ್ಲಿ ಸಲಿಂಗಿಗಳ ಮೇಲೆ ನಿಷೇಧ ಹೇರಿರುವುದು ಮತ್ತು ಎಲ್‌ಜಿಬಿಟಿ ಸಮುದಾಯವನ್ನು ಅಂಗೀಕರಿಸದೇ ಇರುವುದನ್ನು ಪ್ರತಿಭಟಿಸಲು ಈ ತೀರ್ಮಾನ ತೆಗೆದುಕೊಂಡಿದ್ದರು.

ಆದರೆ ಯಾವುದೇ ಆಟಗಾರ ಬಹುವರ್ಣದ ಆರ್ಮ್‌ಬ್ಯಾಂಡ್‌ ಧರಿಸಿ ಕಣಕ್ಕಿಳಿದರೆ, ಅವರಿಗೆ ‘ಹಳದಿ ಕಾರ್ಡ್‌’ ತೋರಿಸಲಾಗುವುದು ಎಂದು ಫಿಫಾ ಎಚ್ಚರಿಕೆ ನೀಡಿರುವ ಕಾರಣ ನಿರ್ಧಾರದಿಂದ ಹಿಂದೆ
ಸರಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT