ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌ ಆಟಗಾರರಲ್ಲಿ ಹೆಚ್ಚುತ್ತಿದೆ ಖಿನ್ನತೆ

Last Updated 20 ಏಪ್ರಿಲ್ 2020, 19:48 IST
ಅಕ್ಷರ ಗಾತ್ರ

ಪ್ಯಾರಿಸ್‌: ಕೊರೊನಾ ವೈರಸ್‌ ಪಿಡುಗಿನಿಂದಾಗಿ ಆಟದಿಂದ ದೂರವಿರುವ ಕಾರಣ ಉದ್ವೇಗ ಮತ್ತು ಖಿನ್ನತೆಯಿಂದ ಬಳಲುತ್ತಿರುವ ಆಟಗಾರರ ಪ್ರಮಾಣ ಹೆಚ್ಚುತ್ತಿದೆ ಎಂದು ಜಾಗತಿಕ ಆಟಗಾರರ ಯೂನಿಯನ್‌ ‘ಫಿಫ್‌ಪ್ರೊ’ ಸೋಮವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಫಿಫ್‌ಪ್ರೊ 16 ದೇಶಗಳ 1,602 ಆಟಗಾರರ ಸಮೀಕ್ಷೆ ನಡೆಸಿದೆ. ಇಂಗ್ಲೆಂಡ್‌, ಸ್ಕಾಟ್ಲೆಂಡ್‌, ಫ್ರಾನ್ಸ್‌, ಆಸ್ಟ್ರೇಲಿಯಾ, ಅಮೆರಿಕ ಮೊದಲಾದ ಪ್ರಮುಖ ದೇಶಗಳು ಇವುಗಳಲ್ಲಿ ಒಳಗೊಂಡಿವೆ. ಈ ಅಧ್ಯಯನದಲ್ಲಿ 468 ಆಟಗಾರ್ತಿಯರೂ ಒಳಗೊಂಡಿದ್ದಾರೆ.

ಆಟಗಾರರಲ್ಲಿ ಶೇ 13ರಷ್ಟು ಮತ್ತು ಆಟಗಾರ್ತಿಯರಲ್ಲಿ ಶೇ 22ರಷ್ಟು ಮಂದಿಯಲ್ಲಿ ಖಿನ್ನತೆಯ ಲಕ್ಷಣಗಳು ಕಂಡುಬಂದಿವೆ. ಸಮೀಕ್ಷೆಗೊಳಪಟ್ಟ ಪ್ರತಿ ಐವರಲ್ಲಿ ಒಬ್ಬರಿಗೆ ಉದ್ವೇಗದ ಲಕ್ಷಣಗಳು ಕಾಣಿಸಿವೆ.

‘ಹಠಾತ್ತಾಗಿ ಫುಟ್‌ಬಾಲ್‌ ಆಟಗಾರ ಹಾಗೂ ಆಟಗಾರ್ತಿಯರು ಒಂಟಿತನ, ದೈನಂದಿನ ಜೀವನಶೈಲಿಯ ನಿರ್ಬಂಧ, ಭವಿಷ್ಯದ ಬಗ್ಗೆ ಚಿಂತೆ..., ಇವುಗಳ ಜೊತೆ ಏಗಬೇಕಾಗಿದೆ’ ಎಂದು ಫ್ರಾನ್ಸ್‌ನ ಮಾಜಿ ಆಟಗಾರ ಹಾಗೂ ಫಿಫ್‌ಪ್ರೊದ ಮುಖ್ಯ ವೈದ್ಯಾಧಿಕಾರಿ ವಿನ್ಸೆಂಟ್‌ ಗಾಟೆಬರ್ಗ್ ವಿಶ್ಲೇಷಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕುಟುಂಬ ಬಿಟ್ಟು ವಿದೇಶದಲ್ಲಿ ನೆಲೆಸಿರುವ ಆಟಗಾರರು ಒತ್ತಡದಲ್ಲಿದ್ದಾರೆ.

ಅಲ್ಪಾವಧಿ ಒಪ್ಪಂದಗಳಿಂದಾಗಿ ಅವರ ಉದ್ವೇಗ ಮತ್ತಷ್ಟು ಹೆಚ್ಚಿಸಿದೆ ಎಂದು ಗಾಟೆಬರ್ಗ್‌ ಹೇಳಿದ್ದಾರೆ. ಫಿಫ್‌ಪ್ರೊ ಸಮೀಕ್ಷೆಗಿಂತ ಮೊದಲು, 2019ರ ಡಿಸೆಂಬರ್‌ ಮತ್ತು ಈ ವರ್ಷದ ಜನವರಿ ಅವಧಿಯಲ್ಲಿ ನಡೆದ ಇಂತಹದೇ ಸಮೀಕ್ಷೆಯಲ್ಲಿ ಖಿನ್ನತೆಯ ಪ್ರಮಾಣ ಕಡಿಮೆಯಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT