ಡೊರಾಡೊಸ್‌ ಕ್ಲಬ್‌ ಕೋಚ್‌ ಸ್ಥಾನಕ್ಕೆ ಮರಡೋನಾ

7

ಡೊರಾಡೊಸ್‌ ಕ್ಲಬ್‌ ಕೋಚ್‌ ಸ್ಥಾನಕ್ಕೆ ಮರಡೋನಾ

Published:
Updated:
Deccan Herald

ಕುಲಿಕಾನ್‌, ಮೆಕ್ಸಿಕೊ: ಅರ್ಜೆಂಟೀನಾದ ಹಿರಿಯ ಫುಟ್‌ಬಾಲ್‌ ಆಟಗಾರ ಡಿಗೋ ಮರಡೋನಾ ಅವರು ಇಲ್ಲಿನ ಡೊರಾಡೊಸ್‌ ಕ್ಲಬ್‌ನ ನೂತನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. 

’ವಿಶ್ವ ಫುಟ್‌ಬಾಲ್‌ ರಂಗದ ದಿಗ್ಗಜರಾಗಿದ್ದ ಮರಡೋನಾ ಅವರನ್ನು ತಂಡದ ಕೋಚ್‌ ಆಗಿ ನೇಮಿಸಿಕೊಳ್ಳಲು ಸಂತಸವಾಗುತ್ತಿದೆ. ತರಬೇತಿ ನೀಡುವುದರಲ್ಲಿಯೂ ಅವರು ಸಾಕಷ್ಟು ಅನುಭವ ಹೊಂದಿರುವುದು ಕ್ಲಬ್‌ಗೆ ನೆರವಾಗಲಿದೆ’ ಎಂದು ಕ್ಲಬ್‌ನ ಆಡಳಿತ ಮಂಡಳಿಯು ಶುಕ್ರವಾರ ತಿಳಿಸಿದೆ.

’ಈ ಋತುವಿನ ಉಳಿದ ಅವಧಿ ಹಾಗೂ ಮುಂದಿನ ವರ್ಷ ಪೂರ್ತಿ ಡಿಗೋ ಅವರು ತಂಡದ ಕೋಚ್‌ ಆಗಿ ಕೆಲಸ ಮಾಡಲಿದ್ದಾರೆ’ ಎಂದೂ ಅದು ತಿಳಿಸಿದೆ. 

ಕೆಲಕಾಲ ಅರ್ಜೆಂಟೀನಾ ತಂಡದ ಕೋಚ್‌ ಆಗಿಯೂ ಮರಡೋನಾ ಅವರು ಕಾರ್ಯನಿರ್ವಹಿಸಿದ್ದರು. 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !