ಬುಧವಾರ, ಅಕ್ಟೋಬರ್ 23, 2019
21 °C

ಫುಟ್‌ಬಾಲ್‌ ಡುರಾಂಡ್‌ ಕಪ್ ಪಂದ್ಯಗಳ ಸ್ಥಳಾಂತರ

Published:
Updated:

ಕೋಲ್ಕತ್ತ: 129ನೇ ಆವೃತ್ತಿಯ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಡಿ ಗುಂಪಿನ ಪಂದ್ಯಗಳನ್ನು ಸಿಲಿಗುರಿಯಿಂದ ಕೋಲ್ಕತ್ತಕ್ಕೆ ಸ್ಥಳಾಂತರ ಮಾಡಲಾಗಿದೆ. ಸೆಮಿಫೈನಲ್‌ ಸೇರಿದಂತೆ ಪಂದ್ಯಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಆಗಸ್ಟ್‌ 20ರ ಬದಲಾಗಿ 21ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಹೌರಾ ಕ್ರೀಡಾಂಗಣ ಡಿ ಗುಂಪಿನ ಐದು ಪಂದ್ಯಗಳ ಆತಿಥ್ಯ ವಹಿಸಲಿದೆ. ಮತ್ತೊಂದು ಪಂದ್ಯ ಮೋಹನ್‌ ಬಾಗನ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಚೆನ್ನೈಯಿನ್‌ ಎಫ್‌ಸಿ, ಗೋಕುಲಂ ಕೇರಳ, ಟಿಆರ್‌ಎಯು ಮತ್ತು ಏರ್‌ಪೋರ್ಸ್‌ ತಂಡಗಳು ಡಿ ಗುಂಪಿನಲ್ಲಿವೆ.

ಟೂರ್ನಿಯ ಉದ್ಘಾಟನಾ ಪಂದ್ಯ ನಿಗದಿಯಂತೆ ಆಗಸ್ಟ್‌ 2ರಂದು ಕೋಲ್ಕತ್ತದ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೋಹನ್‌ ಬಾಗನ್‌ ಮತ್ತು ಮೊಹಮ್ಮಡನ್‌ ಸ್ಪೋರ್ಟಿಂಗ್‌ ಕ್ಲಬ್‌ ಈ ಪಂದ್ಯದಲ್ಲಿ ಸೆಣಸಲಿವೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)