ನವದೆಹಲಿ: ಭಾರತ ಫುಟ್ಬಾಲ್ ತಂಡ ಸತತವಾಗಿ ಹಿನ್ನಡೆ ಕಾಣುತ್ತಿದ್ದ ಪರಿಣಾಮ ಮುಖ್ಯ ಕೋಚ್ ಮನೊಲೊ ಮಾರ್ಕ್ವೆಝ್ ಅವರು ಬುಧವಾರ ಪದತ್ಯಾಗ ಮಾಡಿದ್ದಾರೆ. ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಜೊತೆ ‘ಪರಸ್ಪರ ಸಮ್ಮತಿ’ಯ ಮೇರೆಗೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಎಎಫ್ಎಫ್ ಕಾರ್ಯಕಾರಿ ಸಮಿತಿಯು ಸಭೆ ಸೇರಿ, ಮಾರ್ಕ್ವೆಝ್ ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸಲು ಮಾಡಲು ಒಪ್ಪಿಕೊಂಡಿತು. ಮೂಲ ಒಪ್ಪಂದದ ಪ್ರಕಾರ ಮಾರ್ಕ್ವೆಝ್ ಅವರಿಗೆ ಇನ್ನೂ ಒಂದು ವರ್ಷ ಅವಧಿ ಉಳಿದಿತ್ತು.

‘ಹಣಕಾಸು ವಿಷಯಕ್ಕೆ ಸಂಬಂಧಿಸಿ ಯಾವುದೇ ಅಭಿಪ್ರಾಯಭೇದಗಳಿಲ್ಲದೇ ಪರಸ್ಪರ ಸಮ್ಮತಿಯ ಮೇರೆಗೆ ಎಐಎಫ್ಎಫ್ ಮತ್ತು ಮನೊಲೊ ಒಪ್ಪಂದ ಕೊನೆಗೊಳಿಸಿದ್ದೇವೆ. ಅವರನ್ನು ಕೋಚ್ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಹೊಸ ಮುಖ್ಯ ಕೋಚ್ ನೇಮಕಕ್ಕೆ ಸಂಬಂಧಿಸಿ ಎಐಎಫ್ಎಫ್ ಶೀಘ್ರವೇ ಪ್ರಕ್ರಿಯೆ ಆರಂಭಿಸಲಿದೆ’ ಎಂದು ಫೆಡರೇಷನ್ನ ಉಪ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಸತ್ಯನಾರಾಯಣ ಸುದ್ದಿಸಂಸ್ಥೆಗೆ ತಿಳಿಸಿದರು.

ಮಾರ್ಕ್ವೆಝ್ ಅವರನ್ನು 2024ರ ಜೂನ್ನಲ್ಲಿ ಎರಡು ವರ್ಷಗಳ ಅವಧಿಗೆ ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಅವರ ಅವಧಿಯಲ್ಲಿ ಭಾರತ ತಂಡವು ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಜಯಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.