ಟ್ಯುನಿಷಿಯಾ ಪಾಲಿಗೆ ಖಳನಾದ ಯಾಸಿನ್‌

7
ಪನಾಮ ತಂಡಕ್ಕೆ ‘ಉಡುಗೊರೆ’ ಗೋಲು

ಟ್ಯುನಿಷಿಯಾ ಪಾಲಿಗೆ ಖಳನಾದ ಯಾಸಿನ್‌

Published:
Updated:

ಮೊರ್ಡೊವಿಯಾ: ರಕ್ಷಣಾ ವಿಭಾಗದ ಆಟಗಾರ ಯಾಸಿನ್‌ ಮೆರಾಯ್‌, ಗುರುವಾರ ಟ್ಯುನಿಷಿಯಾ ತಂಡಕ್ಕೆ ಖಳನಾಯಕರಾದರು.

ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡನ್ನು ಒದ್ದ ಯಾಸಿನ್‌, ಪನಾಮ ತಂಡಕ್ಕೆ ‘ಉಡುಗೊರೆ’ ಗೋಲು ನೀಡಿದರು. ಹೀಗಾಗಿ ಪನಾಮ ತಂಡ 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ‘ಜಿ’ ಗುಂಪಿನ ಹೋರಾಟದಲ್ಲಿ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 1–0 ಗೋಲಿನ ಮುನ್ನಡೆ ಗಳಿಸಿತ್ತು.

ಬಲಿಷ್ಠ ಆಟಗಾರರನ್ನು ಹೊಂದಿದ್ದ ಟ್ಯುನಿಷಿಯಾ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. ಈ ತಂಡಕ್ಕೆ ಗೋಲು ಗಳಿಸುವ ಹಲವು ಅವಕಾಶಗಳು ಸಿಕ್ಕಿದ್ದವು. ಇವುಗಳನ್ನು ಸದುಪಯೋಗಪಡಿಸಿಕೊಳ್ಳಲು ತಂಡ ವಿಫಲವಾಯಿತು. ಹೀಗಾಗಿ 30 ನಿಮಿಷಗಳ ಆಟ ಗೋಲುರಹಿತವಾಗಿತ್ತು. 33ನೇ ನಿಮಿಷದಲ್ಲಿ ಯಾಸಿನ್‌ ಮಾಡಿದ ಎಡವಟ್ಟಿನಿಂದಾಗಿ ಪನಾಮ ತಂಡದ ಖಾತೆಗೆ ಗೋಲು ಸೇರ್ಪಡೆಯಾಯಿತು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !