ಬುಧವಾರ, ಅಕ್ಟೋಬರ್ 23, 2019
21 °C

ಫ್ಯಾಂಟಮ್‌ ಎಫ್‌ಸಿಗೆ ಭರ್ಜರಿ ಜಯ

Published:
Updated:

ಬೆಂಗಳೂರು: ಸಂಘಟಿತ ಪ್ರದರ್ಶನ ತೋರಿದ ಫ್ಯಾಂಟಮ್‌ ಎಫ್‌ಸಿ ತಂಡವು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಸಿ ಡಿವಿಜನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ‘ಒ’ ವಲಯದ ಪಂದ್ಯದಲ್ಲಿ ಶುಕ್ರವಾರ ಸುನೇಸಾ ತಂಡವನ್ನು 5–0 ಗೋಲುಗಳಿಂದ ಮಣಿಸಿತು.

ಫ್ಯಾಂಟಮ್‌ ಎಫ್‌ಸಿ ಪರ ಕೊನಾಲಿಸ್‌ ಮರಿಂಗ್‌ (23ನೇ ನಿಮಿಷ), ಕಾವುಂಗ್‌ ಅಂಗುರಾಂಗ್‌ (44ನೇ ನಿಮಿಷ), ನಿಶಾಂತ್‌ (47ನೇ ನಿಮಿಷ), ವಾಂತೊಂಗ್‌ ಕಿಡ್‌ ಐಮೊರ್‌ (52ನೇ ನಿಮಿಷ) ಹಾಗೂ ಅರಿಕ್‌ ಥಾಪಾ (58ನೇ ನಿಮಿಷ) ತಲಾ ಒಂದು ಗೋಲು ಗಳಿಸಿ ಮಿಂಚಿದರು.

ಶನಿವಾರ ನಡೆಯುವ ಪಂದ್ಯದಲ್ಲಿ ಫ್ಯಾಂಟಮ್‌ ತಂಡವು ಯೂನಿವರ್ಸಲ್‌ ಎಫ್‌ಸಿ ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ಬಳಿ ಸದ್ಯ 15 ಪಾಯಿಂಟ್‌ಗಳಿವೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)