ಸೋಮವಾರ, ಜನವರಿ 20, 2020
19 °C

ಫುಟ್‌ಬಾಲ್‌: ಎಎಸ್‌ಎ ಅನಂತಪುರ ತಂಡಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಎಎಸ್‌ಎ ಅನಂತಪುರ ತಂಡವು ಇಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಕಪ್‌ ಅಖಿಲ ಭಾರತ ಫುಟ್‌ಬಾಲ್‌ ಟೂರ್ನಿಯಲ್ಲಿ ಗೆಲುವು ಸಾಧಿಸಿದೆ.

ಸರ್‌ ಎಂ.ವಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಎಸ್‌ಎ ತಂಡ 4–0 ಗೋಲುಗಳಿಂದ ಬೆಂಗಳೂರು ಡ್ರೀಮ್ಸ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಮಣಿಸಿತು.

ಎಎಸ್‌ಎ ತಂಡಕ್ಕೆ ನರೇಂದ್ರ (12, 91ನೇ ನಿ.), ಮಣಿಕಂಠ (43ನೇ ನಿ.), ಆನಂದ್‌ ರೆಡ್ಡಿ (66ನೇ ನಿ.) ಗೋಲುಗಳನ್ನು ತಂದಿತ್ತರು.

ತಿರುವನಂತಪುರ ಕೆಎಸ್‌ಇಬಿ 1–0 ಗೋಲಿನಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ಕರ್ನಾಟಕ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಸುದೀಶ್‌ 73ನೇ ನಿಮಿಷದಲ್ಲಿ ಗೋಲು ಗಳಿಸಿ ಜಯದ ರೂವಾರಿಯಾದರು.

ಕೆಎಸ್‌ಇಬಿ, ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡ ಸೆಮಿಫೈನಲ್‌ ಪ್ರವೇಶಿಸಿವೆ. ಸೆಮಿಫೈನಲ್‌ ಪಂದ್ಯಗಳು ಜ.10ರಂದು ನಡೆಯಲಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು