ಮಂಗಳವಾರ, ನವೆಂಬರ್ 19, 2019
23 °C

ಫುಟ್‌ಬಾಲ್‌ ಪಂದ್ಯ ಡ್ರಾ

Published:
Updated:

ಬೆಂಗಳೂರು: ಎಜಿಒಆರ್‌ಸಿ ಹಾಗೂ ಇನ್‌ಕಮ್‌ ಟ್ಯಾಕ್ಸ್‌ ತಂಡಗಳ ನಡುವಿನ ಫುಟ್‌ಬಾಲ್‌ ಪಂದ್ಯ ಗೋಲುರಹಿತ ಡ್ರಾನಲ್ಲಿ ಅಂತ್ಯಕಂಡಿತು. ಸೋಮವಾರ ಬೆಂಗಳೂರು ಫುಟ್‌ಬಾಲ್‌ ಸ್ಟೇಡಿಯಂನಲ್ಲಿ ನಡೆದ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಲೀಗ್ ಪಂದ್ಯದಲ್ಲಿ ಎರಡೂ ತಂಡಗಳಿಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಜಿದ್ದಾಜಿದ್ದಿ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಗೋಲು ಗಳಿಸುವ ಕೆಲವು ಅವಕಾಶ ಸಿಕ್ಕರೂ ಯಶಸ್ಸು ಲಭಿಸಲಿಲ್ಲ. ಮಂಗಳವಾರ ಸೌತ್‌ ಯುನೈಟೆಡ್‌ ಎಫ್‌ಸಿ–ಓಜೋನ್‌ ಎಫ್‌ಸಿ ನಡುವೆ ಹಣಾಹಣಿ ನಡೆಯಲಿದೆ.

 

ಪ್ರತಿಕ್ರಿಯಿಸಿ (+)