ಬುಧವಾರ, ಜನವರಿ 29, 2020
28 °C
17 ವರ್ಷದೊಳಗಿನ ಮಹಿಳಾ ಫುಟ್‌ಬಾಲ್‌

ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ: ಮಂಗಳವಾರ ಥಾಯ್ಲೆಂಡ್‌ ವಿರುದ್ಧ ಪಂದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಭಾರತದ ವನಿತೆಯರ ತಂಡವು 17 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿಯ ಮೂರನೇ ಹಾಗೂ ಕೊನೆಯ ಲೀಗ್‌ ಪಂದ್ಯದಲ್ಲಿ ಮಂಗಳವಾರ ಥಾಯ್ಲೆಂಡ್‌ ತಂಡವನ್ನು ಎದುರಿಸಲಿದೆ. ಭಾರತ ಈ ಪಂದ್ಯದಲ್ಲಿ ಗೆದ್ದರೆ ಡಿಸೆಂಬರ್‌ 19ರಂದು ಸ್ವೀಡನ್‌ ತಂಡವನ್ನು ಫೈನಲ್‌ನಲ್ಲಿ ಎದುರಿಸಲಿದೆ.

ಪಂದ್ಯದ ಕುರಿತು ಮಾತನಾಡಿರುವ ಭಾರತ ತಂಡದ ಕೋಚ್‌ ಥಾಮಸ್‌ ಡೆನ್ನೆರ್‌ಬೈ ‘ ತಂಡದಲ್ಲಿ ಸದ್ಯ ಉತ್ತಮ ವಾತಾವರಣವಿದ್ದು, ಫೈನಲ್‌ನಲ್ಲಿ ಆಡಬೇಕಾದರೆ ನಾವು ಈ ಪಂದ್ಯ ಗೆಲ್ಲಲೇಬೇಕು. ಸವಾಲಿಗೆ ಸಜ್ಜಾಗಿದ್ದೇವೆ. ಥಾಯ್ಲೆಂಡ್‌ ಪ್ರತಿಭಾನ್ವಿತ ಆಟಗಾರ್ತಿಯರನ್ನು ಹೊಂದಿದೆ. ಆದರೆ ನಮಗೆ ಗೆಲ್ಲುವ ಉತ್ತಮ ಅವಕಾಶಗಳಿವೆ’ ಎಂದು ಹೇಳಿದ್ದಾರೆ.

ಭಾರತ ಹಾಗೂ ಥಾಯ್ಲೆಂಡ್‌ ಎರಡೂ ತಂಡಗಳು ತಾವಾಡಿದ ಮೊದಲ ಪಂದ್ಯಗಳಲ್ಲಿ ಸ್ವೀಡನ್‌ ವಿರುದ್ಧ ಸೋಲು ಕಂಡಿವೆ. ಭಾರತ 0–3ರಿಂದ ಸೋತಿದ್ದರೆ, ಥಾಯ್ಲೆಂಡ್‌ 1–3 ಗೋಲುಗಳಿಂದ ಪರಾಭವ ಕಂಡಿತ್ತು. 

ಪಂದ್ಯ ಆರಂಭ: ಸಂಜೆ 6 ಗಂಟೆ
ಸ್ಥಳ: ಮುಂಬೈ ಫುಟ್‌ಬಾಲ್‌ ಅರೆನಾ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು