ಫುಟ್‌ಬಾಲ್: ಸ್ಟಾಫರ್ಡ್ ಚಾಲೆಂಜ್ ಕಪ್‌ಗೆ ಮರುಜೀವ
ಬೆಂಗಳೂರು: ಕರ್ನಾಟಕದ ಅತ್ಯಂತ ಹಳೆಯ ಫುಟ್‌ಬಾಲ್ ಟೂರ್ನಿಗಳಲ್ಲಿ ಒಂದೆನಿಸಿರುವ ಸ್ಟಾಫರ್ಡ್ ಚಾಲೆಂಜ್ ಕಪ್‌ಗೆ ಮರುಜೀವ ನೀಡಲು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ನಿರ್ಧರಿಸಿದೆ.
30 ವರ್ಷಗಳ ಬಿಡುವಿನ ಬಳಿಕ ಟೂರ್ನಿ ನಡೆಸಲು ಉದ್ದೇಶಿಸಲಾಗಿದ್ದು, ಫೆ.23 ರಿಂದ ಮಾರ್ಚ್ 4ರ ವರೆಗೆ ಆಯೋಜನೆಯಾಗಿದೆ. ಎಲ್ಲ ಪಂದ್ಯಗಳಿಗೆ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣ ವೇದಿಕೆಯೊದಗಿಸಲಿದೆ.
‘1938 ರಲ್ಲಿ ಆರಂಭ ವಾಗಿದ್ದ ಸ್ಟಾಫರ್ಡ್ ಟ್ರೋಫಿ ಟೂರ್ನಿ 1993ರಲ್ಲಿ ಕೊನೆಯದಾಗಿ ನಡೆದಿತ್ತು. ಈ ಹಳೆಯ ಟೂರ್ನಿಯನ್ನು ಮತ್ತೆ ಆರಂಭಿಸಲು ತೀರ್ಮಾನಿಸಲಾಗಿದೆ. ಸಂತೋಷ್ ಟ್ರೋಫಿ ಮತ್ತು ಐ–ಲೀಗ್ ಟೂರ್ನಿಯ ನಡುವೆ ಲಭಿಸಿರುವ ಅಲ್ಪ ದಿನಗಳ ಬಿಡುವಿನಲ್ಲಿ ಈ ಬಾರಿ ಟೂರ್ನಿ ನಡೆಯಲಿದೆ. ಮುಂದಿನ ವರ್ಷದಿಂದ ಎಐಎಫ್‌ಎಫ್ ಕ್ಯಾಲೆಂಡರ್‌ನಲ್ಲಿ ಈ ಟೂರ್ನಿಯನ್ನೂ ಸೇರಿಸಲಾಗುವುದು’ ಎಂದು ಕೆಎಸ್‌ಎಫ್‌ಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈ ಬಾರಿ 16 ತಂಡಗಳನ್ನು ಅಹ್ವಾನಿಸಲಾಗಿದ್ದು, ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿ ಪಂದ್ಯ ನಡೆಸಲಾಗುವುದು. ಪ್ರತಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ವಿಜೇತ ತಂಡಕ್ಕೆ ₹ 2.5 ಲಕ್ಷ, ರನ್ನರ್ಸ್ ಅಪ್‌ಗೆ ₹ 1.5 ಲಕ್ಷ ಹಾಗೂ ಸೆಮಿಫೈನಲ್ ಪ್ರವೇಶಿಸುವ ತಂಡಗಳಿಗೆ ತಲಾ ₹50 ಸಾವಿರ ಬಹು ಮಾನ ನೀಡಲಾಗುವುದು’ ಎಂದರು.
ಪಾಲ್ಗೊಳ್ಳುವ ತಂಡಗಳು: ‘ಎ’ ಗುಂಪು: ಎಫ್‌ಸಿ ಬೆಂಗಳೂರು ಯುನೈಟೆಡ್, ಎಂಇಜಿ, ಡೆಂಪೊ ಎಫ್‌ಸಿ, ಇಂಟರ್ ನ್ಯಾಷನಲ್ ಎಫ್‌ಸಿ ಪಂಜಾಬ್
‘ಬಿ’ ಗುಂಪು: ರೂಟ್ಸ್ ಎಫ್‌ಸಿ, ಎಚ್ಎಎಲ್ ಸ್ಪೋರ್ಟ್ಸ್ ಕ್ಲಬ್, ಗೋಕುಲಂ ಕೇರಳ ಎಫ್‌ಸಿ, ಪಿಫಾ ಸ್ಪೋರ್ಟ್ಸ್ ಎಫ್‌ಸಿ
‘ಸಿ’ ಗುಂಪು: ಬೆಂಗಳೂರು ಎಫ್‌ಸಿ, ಕೆಂಕ್ರೆ ಎಫ್‌ಸಿ, ಶ್ರೀನಿಧಿ ಡೆಕ್ಕನ್ ಎಫ್‌ಸಿ, ಡೆಲ್ಲಿ ಎಫ್‌ಸಿ
‘ಡಿ’ ಗುಂಪು: ಕಿಕ್‌ಸ್ಟಾರ್ಟ್ ಎಫ್‌ಸಿ, ಚೆನ್ನೈಯಿನ್ ಎಫ್‌ಸಿ, ಅರಾ ಎಫ್‌ಸಿ, ಕೇರಳ ಯುನೈಟೆಡ್ ಎಫ್‌ಸಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.