ಬೆಂಗಳೂರು: ಪಾಟರಿಟೌನ್ನ ಸರ್ಕಾರಿ ಪ್ರೌಢಶಾಲಾ ತಂಡವು ಪರಿಕ್ರಮ ಚಾಂಪಿಯನ್ಸ್ ಲೀಗ್ (ಪಿಸಿಎಲ್) ಫುಟ್ಬಾಲ್ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ಶುಕ್ರವಾರ 1–0ಯಿಂದ ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲಾ ತಂಡವನ್ನು ಸೋಲಿಸಿ ಸೆಮಿಫೈನಲ್ಗೆ ಪ್ರವೇಶಿಸಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಟರಿಟೌನ್ ತಂಡದ ಮೊಹಮ್ಮದ್ ಆಶಿಫ್ ಅವರು 9ನೇ ನಿಮಿಷ ನಿರ್ಣಾಯಕ ಗೋಲು ಗಳಿಸಿದರು.

ಕ್ವಾರ್ಟರ್ಫೈನಲ್ ಸುತ್ತಿನ ಇತರ ಪಂದ್ಯಗಳಲ್ಲಿ ಭುವನೇಶ್ವರದ ಕೆಐಎಸ್ಎಸ್ ಶಾಲಾ ತಂಡ 3–0ಯಿಂದ ಗೋವಾದ ಲೊಯೊಲಾ ಪ್ರೌಢಶಾಲೆ ವಿರುದ್ಧ; ದೆಹಲಿ ಪಬ್ಲಿಕ್ ಶಾಲೆ (ಉತ್ತರ) 2–0ಯಿಂದ ಹೆಡ್ಸ್ಟಾರ್ಟ್ ಅಕಾಡೆಮಿ ವಿರುದ್ಧ; ಗ್ರೀನ್ವುಡ್ ಪ್ರೌಢಶಾಲಾ ತಂಡವು 2–0ಯಿಂದ ಪರಿಕ್ರಮ ಸೆಂಟರ್ ಫಾರ್ ಲರ್ನಿಂಗ್ ತಂಡದ ವಿರುದ್ಧ ಜಯ ಸಾಧಿಸಿದವು.

‘ಈಕ್ವಾಲಿಟಿ ಪ್ಲೇಟ್’ ವಿಭಾಗದಲ್ಲಿ ಲೊಯೊಲಾ ಪ್ರೌಢಶಾಲೆ ಹಾಗೂ ಹೆಡ್ಸ್ಟಾರ್ಟ್ ಅಕಾಡೆಮಿ ತಂಡಗಳು ಪ್ರಶಸ್ತಿ ಸುತ್ತು ಪ್ರವೇಶಿಸಿದವು.

ಸೆಮಿಫೈನಲ್ ಪಂದ್ಯಗಳಲ್ಲಿ ಲೊಯೊಲಾ ಪ್ರೌಢಶಾಲಾ ತಂಡವು 2–1ರಿಂದ ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆ ವಿರುದ್ಧ, ಹೆಡ್ಸ್ಟಾರ್ಟ್ ಅಕಾಡೆಮಿ ತಂಡವು ಪೆನಾಲ್ಟಿ ಶೂಟೌಟ್ನಲ್ಲಿ 4–1ರಿಂದ ಪರಿಕ್ರಮ ತಂಡದ ವಿರುದ್ಧ ಗೆಲುವು ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.