ಗುರುವಾರ , ನವೆಂಬರ್ 21, 2019
22 °C

ಫುಟ್‌ಬಾಲ್‌: ಸೆಮಿಗೆ ಬಳ್ಳಾರಿ

Published:
Updated:
Prajavani

ಬಳ್ಳಾರಿ: ಏಕಪಕ್ಷೀಯವಾಗಿ ಅಂತ್ಯಕಂಡ ಪಂದ್ಯದಲ್ಲಿ ಚುರುಕಿನ ಪ್ರದರ್ಶನ ನೀಡಿದ ಬಳ್ಳಾರಿ ಬಾಲಕರ ತಂಡ ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿರುವ ಪಿಯು ಕಾಲೇಜುಗಳ ರಾಜ್ಯಮಟ್ಟದ ಫುಟ್‌ಬಾಲ್‌ ಟೂರ್ನಿಯಲ್ಲಿ ಸೆಮಿಫೈನಲ್‌
ಪ್ರವೇಶಿಸಿದೆ.

ನಗರದ ಬಿ.ಡಿ.ಎ.ಎ. ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬಳ್ಳಾರಿ ತಂಡದವರು 6–0 ಗೋಲುಗಳಿಂದ ಬಾಗಲಕೋಟೆ ತಂಡವನ್ನು ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ಕೊಡಗು ತಂಡ 3–1ರಲ್ಲಿ ಹಾಸನ ತಂಡವನ್ನು ಸೋಲಿಸಿತು.

ಬಾಲಕರ ವಿಭಾಗದಲ್ಲಿ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ತಂಡಗಳು ಕ್ವಾರ್ಟರ್ ಫೈನಲ್‌ ಪ್ರವೇಶಿಸಿವೆ.

ಸೇಂಟ್‌ ಜಾನ್ಸ್‌ ಶಾಲೆಯ ಮೈದಾನದಲ್ಲಿ ನಡೆದ ಬಾಲಕಿಯರ ಪಂದ್ಯಗಳಲ್ಲಿ ಬೆಂಗಳೂರು ಉತ್ತರ ತಂಡ 5–0ಗೋಲುಗಳಿಂದ ಕೊಡಗಿನ ತಂಡದ ಮೇಲೂ, ಬೆಂಗಳೂರು ದಕ್ಷಿಣ ತಂಡ 4–0ರಲ್ಲಿ ಚಿಕ್ಕೋಡಿ ವಿರುದ್ಧವೂ, ದಕ್ಷಿಣ ಕನ್ನಡ ತಂಡ 2–0ರಲ್ಲಿ ಮೈಸೂರು ತಂಡದ ಮೇಲೂ ಗೆಲುವು ಪಡೆದು ಸೆಮಿಫೈನಲ್‌ಗೆ ಲಗ್ಗೆ ಇಟ್ಟವು.

ಪ್ರತಿಕ್ರಿಯಿಸಿ (+)