ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಫುಟ್‌ಬಾಲ್‌ ಆಟಗಾರ ಪ್ರಬೀರ್ ಮಜುಂದಾರ್ ಇನ್ನಿಲ್ಲ

Published 28 ಡಿಸೆಂಬರ್ 2023, 15:43 IST
Last Updated 28 ಡಿಸೆಂಬರ್ 2023, 15:43 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಫುಟ್‌ಬಾಲ್‌ ತಂಡದ ಮಾಜಿ ಡಿಫೆಂಡರ್‌ ಪ್ರಬೀರ್ ಮಜುಂದಾರ್ (77) ಅನಾರೋಗ್ಯದಿಂದ ಗುರುವಾರ ನಿಧನರಾದರು. ಅವರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ.

ಟೆಹ್ರಾನ್‌ನಲ್ಲಿ ನಡೆದ 1974ರ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು.

1960–1970ರ ದಶಕದಲ್ಲಿ ದೇಶೀಯ ಫುಟ್‌ಬಾಲ್‌ನಲ್ಲಿ ಸಕ್ರಿಯವಾಗಿದ್ದ ಅವರು, ಈಸ್ಟ್ ಬೆಂಗಾಲ್ ಮತ್ತು ಈಸ್ಟರ್ನ್ ರೈಲ್ವೇಸ್‌ನ ತಂಡವನ್ನು ಪ್ರತಿನಿಧಿಸಿದ್ದರು. ಪ್ರಬೀರ್ ಅವರಿದ್ದ ಈಸ್ಟ್‌ ಬೆಂಗಾಲ್‌ ತಂಡವು ಕೋಲ್ಕತ್ತ ಫುಟ್‌ಬಾಲ್‌ ಲೀಗ್‌, ಐಎಫ್‌ಎ ಶೀಲ್ಡ್‌, ಡುರಾಂಡ್‌ ಕಪ್‌ಮ ರೋವರ್ಸ್‌ ಕಪ್‌ ಸೇರಿದಂತೆ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದೆ.

‘ಅಂದಿನ ಕಾಲಘಟ್ಟದಲ್ಲಿ ಪ್ರಬೀರ್ ಮಜುಂದಾರ್ ಅವರು ವಿಶ್ವಾಸಾರ್ಹ ಮತ್ತು ಗೌರವಾನ್ವಿತ ಡಿಫೆಂಡರ್‌ಗಳಲ್ಲಿ ಒಬ್ಬರು. ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದರು’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ಅಧ್ಯಕ್ಷ ಕಲ್ಯಾಣ್‌ ಚೌಬೆ ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT