ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಫುಟ್‌ಬಾಲ್ ಆಟಗಾರ ಪ್ರಶಾಂತ್ ಡೋರಾ ನಿಧನ

Last Updated 26 ಜನವರಿ 2021, 13:33 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತ ಫುಟ್‌ಬಾಲ್ ತಂಡದ ಮಾಜಿ ಗೋಲ್‌ಕೀಪರ್ ಪ್ರಶಾಂತ್‌ ಡೋರಾ (44) ಮಂಗಳವಾರ ಅನಾರೋಗ್ಯದಿಂದ ನಿಧನರಾದರು. ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.

ಕೋಲ್ಕತ್ತ ಮೈದಾನದ ಮೂರು ಪ್ರಮುಖ ಕ್ಲಬ್‌ಗಳ ಪರ ಆಡಿದ ಹಿರಿಮೆ ಹೊಂದಿದ್ದ ಪ್ರಶಾಂತ್, ಹಿಮೊಪ್ಯಾಗೊಸಿಟಿಕ್‌ ಲಿಂಫೊಹಿಟ್ಟಿಯೊಸಿಟೊಸಿಸ್‌ (ಎಚ್‌ಎಲ್‌ಎಚ್‌) ಎಂಬ ಅಪರೂಪದ ಕಾಯಿಲೆಯಿಂದ ಬಳುತ್ತಿದ್ದರು ಎಂದು ಅವರ ಹಿರಿಯ ಸಹೋದರ ಹೇಮಂತ್ ಹೇಳಿದ್ದಾರೆ. ಹೇಮಂತ್ ಕೂಡ ಭಾರತ ತಂಡದ ಪರ ಗೋಲ್‌ಕೀಪರ್ ಆಗಿದ್ದರು.

1999ರಲ್ಲಿ ಥಾಯ್ಲೆಂಡ್ ವಿರುದ್ಧ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಭಾರತ ತಂಡದ ಪರ ಪ್ರಶಾಂತ್ ಪದಾರ್ಪಣೆ ಮಾಡಿದ್ದರು. ದಕ್ಷಿಣ ಏಷ್ಯಾ ಫುಟ್‌ಬಾಲ್ ಫೆಡರೇಷನ್‌ (ಸ್ಯಾಫ್‌) ಕಪ್‌ ಹಾಗೂ ಸ್ಯಾಫ್‌ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಅವರು ಪ್ರತಿನಿಧಿಸಿದ್ದರು.

ಬಂಗಾಳ ರಾಜ್ಯ ತಂಡ, ಮೊಹಮ್ಮಡನ್‌ ಸ್ಪೋರ್ಟಿಂಗ್, ಮೋಹನ್ ಬಾಗನ್‌ ಹಾಗೂ ಈಸ್ಟ್ ಬೆಂಗಾಲ್ ಕ್ಲಬ್‌ಗಳ ಪರ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT