ಗುರುವಾರ , ಜನವರಿ 30, 2020
19 °C

ಐ ಲೀಗ್‌: ಡ್ರಾ ಪಂದ್ಯದಲ್ಲಿ ರಿಯಲ್‌ ಕಾಶ್ಮೀರ್‌

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ದ್ವಿತೀಯಾರ್ಧದಲ್ಲಿ ಗೋಲು ಬಾರಿಸಿದ ನೋಹೆರೆ ಕ್ರಿಜೊ, ಆತಿಥೇಯ ರಿಯಲ್‌ ಕಾಶ್ಮೀರ್‌ ಎಫ್‌ಸಿ ತಂಡದ ಸೋಲು ತಪ್ಪಿಸಿದರು.

ಕ್ರಿಜೊ ಅವರ ಕಾಲ್ಚಳಕದ ಬಲದಿಂದ ಕಾಶ್ಮೀರ್‌ ಎಫ್‌ಸಿ ತಂಡ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ ಮಿನರ್ವ ಪಂಜಾಬ್‌ ಎಫ್‌ಸಿ ಎದುರು 1–1 ಗೋಲುಗಳಿಂದ ಡ್ರಾ ಸಾಧಿಸಿತು.

ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಮಿನರ್ವ 21ನೇ ನಿಮಿಷದಲ್ಲಿ ಖಾತೆ ತೆರೆಯಿತು. ಈ ತಂಡದ ಮಕಾನ್‌ ಛೋಟೆ ಗೋಲು ಬಾರಿಸಿದರು.ನಂತರ ಎರಡು ತಂಡಗಳು ತುರುಸಿನ ಪೈಪೋಟಿ ನಡೆಸಿದವು.

0–1 ಗೋಲಿನ ಹಿನ್ನಡೆಯೊಂದಿಗೆ ವಿರಾಮಕ್ಕೆ ಹೋಗಿದ್ದ ಕಾಶ್ಮೀರ್‌ ತಂಡ ದ್ವಿತೀಯಾರ್ಧದಲ್ಲಿ ಮಿಂಚಿತು. ಈ ತಂಡದ ಕ್ರಿಜೊ 62ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಸಮಬಲಕ್ಕೆ ಕಾರಣರಾದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು