ಇಂಫಾಲ: ತವರಿನ ಅಭಿಮಾನಿಗಳ ಎದುರು ಆಡಿದ ನೆರೋಕಾ ಎಫ್ಸಿ ತಂಡ ಐ ಲೀಗ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಿದೆ.

ಶುಕ್ರವಾರ ನಡೆದ ಹಣಾಹಣಿಯಲ್ಲಿ ನೆರೋಕಾ 2–1 ಗೋಲುಗಳಿಂದ ಕೋಲ್ಕತ್ತದ ಮೋಹನ್ ಬಾಗನ್ ತಂಡವನ್ನು ಪರಾಭವಗೊಳಿಸಿತು.

ಈ ಗೆಲುವಿನೊಂದಿಗೆ ಒಟ್ಟು ಪಾಯಿಂಟ್ಸ್ ಅನ್ನು 18ಕ್ಕೆ ಹೆಚ್ಚಿಸಿಕೊಂಡಿರುವ ನೆರೋಕಾ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರ ಸ್ಥಾನಕ್ಕೇರಿತು. ಚೆನ್ನೈ ಸಿಟಿ ಎಫ್ಸಿ ಕೂಡಾ ಇಷ್ಟೇ ಪಾಯಿಂಟ್ಸ್ ಕಲೆಹಾಕಿದೆ.

ಬಾಗನ್ ಖಾತೆಯಲ್ಲಿ 15 ಪಾಯಿಂಟ್ಸ್ ಇದ್ದು ಈ ತಂಡ ಪಟ್ಟಿಯಲ್ಲಿ ಐದನೇ ಸ್ಥಾನ ಹೊಂದಿದೆ.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ನೆರೋಕಾ ತಂಡ 24ನೇ ನಿಮಿಷದಲ್ಲಿ ಖಾತೆ ತೆರೆಯಿತು. ಬ್ರೆಜಿಲ್ನ ಎಡ್ವರ್ಡ್ ಫೆರೈರಾ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು.

ನಂತರ ಮೋಹನ್ ಬಾಗನ್ ಪರಿಣಾಮಕಾರಿ ಸಾಮರ್ಥ್ಯ ತೋರಿತು. 63ನೇ ನಿಮಿಷದಲ್ಲಿ ಈ ತಂಡದ ಹೆನ್ರಿ ಕಿಸೆಕಾ ಗೋಲು ಹೊಡೆದು 1–1 ಸಮಬಲಕ್ಕೆ ಕಾರಣರಾದರು.

ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ನೆರೋಕಾ ತಂಡದ ಅರಿನ್ ವಿಲಿಯಮ್ಸ್ ಅವಕಾಶ ನೀಡಲಿಲ್ಲ. 69ನೇ ನಿಮಿಷದಲ್ಲಿ ಕಾಲ್ಚಳಕ ತೋರಿದ ಅವರು ಆತಿಥೇಯರಿಗೆ 2–1 ಮುನ್ನಡೆ ತಂದುಕೊಟ್ಟರು.

ನಂತರ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿದ ನೆರೋಕಾ ತಂಡ ಎದುರಾಳಿಗಳ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.