ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಮೂರನೇ ಸುತ್ತಿನಲ್ಲಿ ಆಡಲು ಅವಕಾಶ ಗಳಿಸಿದ ಭಾರತ

ಏಷ್ಯಾಕಪ್ ಅರ್ಹತಾ ಟೂರ್ನಿ: ಅಫ್ಗಾನಿಸ್ತಾನ ಎದುರಿನ ಪಂದ್ಯ ಡ್ರಾ
Last Updated 16 ಜೂನ್ 2021, 5:28 IST
ಅಕ್ಷರ ಗಾತ್ರ

ದೋಹಾ: ಗಳಿಸಿದ ಮುನ್ನಡೆಯನ್ನು ಉಳಿಸಿಕೊಳ್ಳಲಾಗದ ಭಾರತ ಫುಟ್‌ಬಾಲ್‌ ತಂಡವು ವಿಶ್ವಕಪ್ ಮತ್ತು ಏಷ್ಯಾಕಪ್ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು ಡ್ರಾ ಸಾಧಿಸಿತು. ಆದರೆ ಏಷ್ಯಾಕಪ್ ಅರ್ಹತೆಯ ಮೂರನೇ ಸುತ್ತಿನಲ್ಲಿ ಆಡಲು ಅವಕಾಶ ಗಳಿಸಿತು.

ಮಂಗಳವಾರ ಇಲ್ಲಿನ ಜಸ್ಸಿಮ್‌ ಬಿನ್ ಹಮದ್‌ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಉಭಯ ತಂಡಗಳು 1–1ರ ಸಮಬಲ ಸಾಧಿಸಿದವು. ಪಂದ್ಯದ 75ನೇ ನಿಮಿಷದಲ್ಲಿ ಅಫ್ಗಾನಿಸ್ತಾನದ ಒವಾಯಿಸ್ ಅಜೀಜಿ ಭಾರತಕ್ಕೆ ‘ಉಡುಗೊರೆ ಗೋಲು‘ ನೀಡಿದರು.

ಆದರೆ 82ನೇ ನಿಮಿಷದಲ್ಲಿ ಹುಸೇನ್‌ ಜಾಮನಿ ಗಳಿಸಿದ ಗೋಲಿನ ಬಲದಿಂದ ಸಮಬಲ ಸಾಧಿಸುವಲ್ಲಿ ಅಫ್ಗಾನಿಸ್ತಾನ ಯಶಸ್ವಿಯಾಯಿತು.

2019ರಲ್ಲಿ ಮೊದಲ ಲೆಗ್‌ನಲ್ಲಿ ನಡೆದ ಪಂದ್ಯದಲ್ಲೂ ಉಭಯ ತಂಡಗಳು 1–1ರಿಂದ ಡ್ರಾ ಸಾಧಿಸಿದ್ದವು.

ಎಂಟು ಪಂದ್ಯಗಳಿಂದ ಏಳು ಪಾಯಿಂಟ್ಸ್ ಕಲೆಹಾಕಿದ ಸುನಿಲ್ ಚೆಟ್ರಿ ನಾಯಕತ್ವದ ಭಾರತ ‘ಇ’ ಗುಂಪಿನಲ್ಲಿ ಮೂರನೇ ಸ್ಥಾನ ಗಳಿಸಿತು. ಕತಾರ್ ಮತ್ತು ಒಮನ್ ಮೊದಲೆರಡು ಸ್ಥಾನಗಳಲ್ಲಿವೆ. ಅಫ್ಗಾನಿಸ್ತಾನದ ನಾಲ್ಕನೇ ಸ್ಥಾನದಲ್ಲಿದೆ.

ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಗರಿಷ್ಠ ಗೋಲು ಗಳಿಸಿದ 10 ಮಂದಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಗಳಿಸುವ ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ಅವರ ಆಸೆ ಈ ಪಂದ್ಯದಲ್ಲಿ ಈಡೇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT