ದುಬೈ: ಭಾರತ 23 ವರ್ಷದೊಳಗಿನವರ ಫುಟ್‌ಬಾಲ್ ತಂಡವು ಏಷ್ಯಾ ಕಪ್ ಅರ್ಹತಾ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ 2–1ರಿಂದ ಒಮನ್ ತಂಡವನ್ನು ಪರಾಭವಗೊಳಿಸಿತು.

ಪಂದ್ಯದ ಏಳನೇ ನಿಮಿಷದಲ್ಲೇ ಸ್ಪಾಟ್ ಕಿಕ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ರಹೀಂ ಅಲಿ ಭಾರತ ತಂಡಕ್ಕೆ ಮುನ್ನಡೆ ಒದಗಿಸಿದರು.

ವಿಕ್ರಂ ಈ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.38ನೇ ನಿಮಿಷದಲ್ಲಿ ರಹೀಂ ಅಲಿ ಅವರಿಂದ ಪಾಸ್ ಪಡೆದ ಅವರು ಒಮನ್ ಗೋಲ್‌ಕೀಪರ್‌ನನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾದರು.

89ನೇ ನಿಮಿಷದಲ್ಲಿ ಒಮನ್‌ನ ಅಬ್ದುಲ್ಲಾ ತಮ್ಮ ತಂಡದ ಹಿನ್ನಡೆಯನ್ನು ತಗ್ಗಿಸಿದರು.

‘ಇದು ರೋಮಾಂಚನಕಾರಿ ಪಂದ್ಯವಾಗಿತ್ತು. ಆರಂಭದಲ್ಲೇ ಗೋಲು ಗಳಿಸಬೇಕೆಂಬ ನಮ್ಮ ಪ್ರಯತ್ನ ಯಶಸ್ವಿಯಾಯಿತು. ಆ ಬಳಿಕ ಆಟದ ತಂತ್ರವನ್ನು ಬದಲಿಸಿದ ಕಾರಣ ಜಯ ಒಲಿಯಿತು‘ ಎಂದು ಭಾರತ ತಂಡದ ಮುಖ್ಯ ಕೋಚ್ ಇಗರ್ ಸ್ಟಿಮ್ಯಾಚ್ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.