ನವದೆಹಲಿ: ಭಾರತ ಪುರುಷರ ಫುಟ್ಬಾಲ್ ತಂಡ ಫಿಫಾ ಗುರುವಾರ ಪ್ರಕಟಿಸಿದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಆರು ಸ್ಥಾನ ಕುಸಿದು 133ನೇ ಸ್ಥಾನದಲ್ಲಿದೆ. ಇದು ಒಂಬತ್ತು ವರ್ಷಗಳಲ್ಲಿ ಭಾರತ ತಂಡದ ಕನಿಷ್ಠ ಕ್ರಮಾಂಕವಾಗಿದೆ.

ಜೂನ್ನಲ್ಲಿ ಎರಡು ಪಂದ್ಯಗಳನ್ನು ಭಾರತ ಫುಟ್ಬಾಲ್ ತಂಡ ಸೋತಿದ್ದು ಇದಕ್ಕೆ ಕಾರಣ. ಜೂನ್ 4ರಂದು ಸೌಹಾರ್ದ ಪಂದ್ಯದಲ್ಲಿ ಥಾಯ್ಲೆಂಡ್ ಎದುರು 0–2 ಗೋಲುಗಳಿಂದ ಸೋಲನುಭವಿಸಿತ್ತು. ನಂತರ ಎಎಫ್ಸಿ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ 0–1 ಗೋಲಿನಿಂದ ತನಗಿಂತ ಕಡಿಮೆ ಕ್ರಮಾಂಕದ ಹಾಂಗ್ಕಾಂಗ್ ತಂಡಕ್ಕೆ ಮಣಿದಿತ್ತು.

ಈ ಹಿನ್ನಡೆಯ ನಂತರ ಹೆಡ್ ಕೊಚ್ ಮನೊಲೊ ಮಾರ್ಕ್ವೆಝ್ ಅವರು ಎಐಎಫ್ಎಫ್ ಸಮ್ಮತಿಯೊಡನೆ ತಂಡ ತೊರೆದಿದ್ದರು.

ಭಾರತದ ಈ ಹಿಂದಿನ ಕನಿಷ್ಠ ರ್ಯಾಂಕಿಂಗ್ 135 (2016ರ ಡಿಸೆಂಬರ್) ಆಗಿತ್ತು. ಶ್ರೇಷ್ಠ ರ್ಯಾಂಕಿಂಗ್ 94 ಆಗಿದ್ದು, ಇದನ್ನು 1996ರ ಫೆಬ್ರುವರಿಯಲ್ಲಿ ದಾಖಲಿಸಿತ್ತು.

ಏಷ್ಯಾದ 46 ರಾಷ್ಟ್ರಗಳಲ್ಲಿ ಭಾರತ 24ನೇ ಸ್ಥಾನದಲ್ಲಿದೆ. ಜಪಾನ್ ಅಗ್ರಸ್ಥಾನದಲ್ಲಿದೆ.

ವಿಶ್ವ ಚಾಂಪಿಯನ್ ಅರ್ಜೆಂಟೀನಾ ಅಗ್ರಸ್ಥಾನದಲ್ಲಿದೆ. ಸ್ಪೇನ್, ಫ್ರಾನ್ಸ್, ಇಂಗ್ಲೆಂಡ್, ಬ್ರೆಜಿಲ್, ಪೋರ್ಚುಗಲ್, ನೆದರ್ಲೆಂಡ್ಸ್, ಬೆಲ್ಜಿಯಂ, ಜರ್ಮನಿ ಮತ್ತು ಕ್ರೊವೇಷ್ಯಾ ನಂತರದ ಸ್ಥಾನಗಳನ್ನು ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.