ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಕೋಲ್ಕತ್ತದಲ್ಲಿ ಏಷ್ಯಾಕಪ್ ಅರ್ಹತಾ ಪಂದ್ಯಗಳು

Last Updated 18 ಫೆಬ್ರುವರಿ 2022, 14:15 IST
ಅಕ್ಷರ ಗಾತ್ರ

ನವದೆಹಲಿ: 2023ರ ಏಷ್ಯಾಕಪ್ ಫುಟ್‌ಬಾಲ್‌ ಟೂರ್ನಿಗಾಗಿ ಭಾರತ ಆಡುವ ಮೂರನೇ ಸುತ್ತಿನ ಅರ್ಹತಾ ಪಂದ್ಯಗಳುಈ ವರ್ಷದ ಜೂನ್‌ನಲ್ಲಿ ಕೋಲ್ಕತ್ತದಲ್ಲಿ ನಡೆಯಲಿವೆ.

ಏಷ್ಯಾಕಪ್ ಟೂರ್ನಿಯ ಮೂರನೇ ಸುತ್ತಿನ ಅರ್ಹತಾ ಪಂದ್ಯಗಳು ಆರು ತಾಣಗಳಲ್ಲಿ ನಿಗದಿಯಾಗಿದ್ದು, ಭಾರತ ತಂಡವನ್ನು ಒಳಗೊಂಡಿರುವ ಗುಂಪು ಹಂತದ ಪಂದ್ಯಗಳು ಜೂನ್‌ 8, 11 ಮತ್ತು 14ರಂದು ಕೋಲ್ಕತ್ತದ ಸಾಲ್ಟ್‌ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿವೆ.

ಇತರ ಐದು ಗುಂಪಿನ ಪಂದ್ಯಗಳು ಕುವೈತ್, ಕಿರ್ಗಿಸ್‌ ಗಣರಾಜ್ಯ, ಮಲೇಷ್ಯಾ, ಮಂಗೋಲಿಯಾ ಮತ್ತು ಉಜ್ಬೆಕಿಸ್ತಾನದಲ್ಲಿ ನಡೆಯಲಿವೆ. ಆರು ಗುಂಪುಗಳ ವಿಜೇತರು ಮತ್ತು ಎರಡನೇ ಸ್ಥಾನ ಪಡೆದಅತ್ಯುತ್ತಮ ಐದು ತಂಡಗಳು ಏಷ್ಯಾಕಪ್‌ಗೆ ಟಿಕೆಟ್ ಗಳಿಸಲಿವೆ. ಟೂರ್ನಿಯು ಮುಂದಿನ ವರ್ಷ ಜೂನ್ 16ರಂದು ಚೀನಾದಲ್ಲಿ ನಿಗದಿಯಾಗಿದೆ.

‘ಅರ್ಹತಾ ಪಂದ್ಯಗಳನ್ನು ಆಡಲು ನಮ್ಮ ತಂಡವು ಉತ್ಸುಕವಾಗಿದೆ. ಆ ವೇಳೆಗೆ ಕ್ರೀಡಾಂಗಣಕ್ಕೆ ಪ್ರೇಕ್ಷಕರು ಬರಲಿ ಎಂದು ಆಶಿಸುತ್ತೇನೆ. ನಮ್ಮ ಗೆಲುವಿಗೆ ಅವರು ಹುರಿದುಂಬಿಸಬೇಕು‘ ಎಂದು ಭಾರತ ಫುಟ್‌ಬಾಲ್ ತಂಡದ ಕೋಚ್ ಇಗರ್ ಸ್ಟಿಮ್ಯಾಚ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT