ಐಎಸ್‌ಎಲ್‌: ಎಟಿಕೆ–ಕೇರಳ ಬ್ಲಾಸ್ಟರ್ಸ್‌ ಹಣಾಹಣಿ

7

ಐಎಸ್‌ಎಲ್‌: ಎಟಿಕೆ–ಕೇರಳ ಬ್ಲಾಸ್ಟರ್ಸ್‌ ಹಣಾಹಣಿ

Published:
Updated:

ಬೆಂಗಳೂರು: ಈ ಸಲದ ಹಿರೋ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ವೇಳಾಪಟ್ಟಿ ಶನಿವಾರ ಪ್ರಕಟಗೊಂಡಿದೆ.

ಸೆಪ್ಟೆಂಬರ್‌ 29ರಂದು ಕೋಲ್ಕತ್ತದ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ. ಈ ಹಣಾಹಣಿಯಲ್ಲಿ ಎಟಿಕೆ ಹಾಗೂ ಕೇರಳ ಬ್ಲಾಸ್ಟರ್ಸ್‌ ತಂಡಗಳು ಸೆಣಸಲಿವೆ. 

ಹಾಲಿ ರನ್ನರ್‌ ಅಪ್‌ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವು ಸೆಪ್ಟೆಂಬರ್‌ 30ರಂದು ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈಯನ್‌ ಫುಟ್‌ಬಾಲ್‌ ಕ್ಲಬ್‌ ತಂಡದೊಂದಿಗೆ ಸೆಣಸಲಿದೆ. ಈ ಪಂದ್ಯವು ಬೆಂಗಳೂರಿನ ಕಂಠೀರವಕ್ರೀಡಾಂಗಣದಲ್ಲಿ ನಡೆಯಲಿದೆ. 

ಈ ಸಲದ ಟೂರ್ನಿಯಲ್ಲಿ ಒಟ್ಟು 12 ಸುತ್ತುಗಳಿದ್ದು, 59 ಪಂದ್ಯಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !