ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌ ಫೈನಲ್ ಮೇ 4ರಂದು- ಫುಟ್‌ಬಾಲ್‌ ಲೀಗ್‌

19ರಿಂದ ಪ್ಲೇ ಆಫ್‌ ಪಂದ್ಯಗಳು
Published 11 ಏಪ್ರಿಲ್ 2024, 14:10 IST
Last Updated 11 ಏಪ್ರಿಲ್ 2024, 14:10 IST
ಅಕ್ಷರ ಗಾತ್ರ

ಮುಂಬೈ: ಈ ಋತುವಿನ ಇಂಡಿಯನ್‌ ಸೂಪರ್‌ ಲೀಗ್‌ನ ಫೈನಲ್ ಪಂದ್ಯ ಮೇ 4ರಂದು ನಡೆಯಲಿದೆ. ಪ್ಲೇ ಆಫ್‌ ಪಂದ್ಯಗಳು ಏಪ್ರಿಲ್‌ 19 ರಿಂದ ನಡೆಯಲಿವೆ ಎಂದು ಫುಟ್‌ಬಾಲ್‌ ಲೀಗ್‌ನ ಆಯೋಜಕರು ಗುರುವಾರ ಇಲ್ಲಿ ತಿಳಿಸಿದ್ದಾರೆ.

ಫೈನಲ್ ಪಂದ್ಯ ನಡೆಯುವ ತಾಣವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಲೀಗ್‌ನ ಆಯೋಜಕರಾದ ಫುಟ್‌ಬಾಲ್‌ ಸ್ಪೋರ್ಟ್ಸ್‌ ಡೆವಲಪ್‌ಮೆಮಟ್‌ ಲಿಮಿಟೆಡ್‌ (ಎಫ್‌ಎಸ್‌ಡಿಎಲ್‌) ತಿಳಿಸಿದೆ.

‘ಲೀಗ್‌ನ ಫೈನಲ್ ಮೇ 4ರಂದು ನಡೆಯಲಿದೆ. ಫೈನಲ್‌ಗೆ ಸ್ಪರ್ಧೆ ಏಪ್ರಿಲ್ 19ರಿಂದ ನಾಕೌಟ್‌, ಸೆಮಿಫೈನಲ್‌ (ತವರು ಮತ್ತು ಹೊರಗೆ ಮಾದರಿ) ಮೂಲಕ ನಡೆಯಲಿವೆ’ ಎಂದು ಐಎಸ್‌ಎಲ್‌ ಹೇಳಿಕೆಯಲ್ಲಿ ತಿಳಿಸಿದೆ.

ಲೀಗ್‌ನಲ್ಲಿ ಮೊದಲ ಎರಡು ಸ್ಥಾನ ಗಳಿಸುವ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಮೂರರಿಂದ ಆರರವರೆಗೆ ಸ್ಥಾನ ಪಡೆಯುವ ತಂಡಗಳು, ಸಿಂಗಲ್‌–ಲೆಗ್‌ ಪ್ಲೇ ಆಫ್‌ ಪಂದ್ಯಗಳನ್ನು ನಾಕೌಟ್‌ ಮಾದರಿಯಲ್ಲಿ ಆಡಲಿವೆ. ಇದರ ನಂತರ ಸೆಮಿಫೈನಲ್‌ನಲ್ಲಿ ಆಡುವ ಇನ್ನೆರಡು ತಂಡಗಳ ನಿರ್ಧಾರವಾಗಲಿದೆ.

ಈ ಬಾರಿಯ ಐಎಸ್‌ಎಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ಮತ್ತು ಮೋಹನ್‌ ಬಾಗನ್ ತಂಡ ಲೀಗ್‌ ಹಂತದಲ್ಲಿ ಶೀಲ್ಡ್‌ ಗೆಲುವಿಗೆ ಪೈಪೋಟಿಯಲ್ಲಿದೆ. ಪ್ಲೇ ಆಫ್‌ ತಂಡಗಳೂ ನಿರ್ಧಾರವಾಗಿವೆ.

ಪ್ಲೇ ಆಫ್‌ನ ಆರು ತಂಡಗಳು: ಮುಂಬೈ ಎಫ್‌ಸಿ, ಮೋಹನ್ ಬಾಗನ್ ಎಸ್‌ಜಿ, ಒಡಿಶಾ ಎಫ್‌ಸಿ, ಎಫ್‌ಸಿ ಗೋವಾ, ಕೇರಳ ಬ್ಲಾಸ್ಟರ್ಸ್‌ಎಫ್‌ಸಿ ಮತ್ತು ಚೆನ್ನೈಯಿನ್‌ ಎಫ್‌ಸಿ.

ಪ್ಲೇ ಆಫ್‌ ವೇಳಾಪಟ್ಟಿ: ನಾಕೌಟ್‌ ಪಂದ್ಯಗಳು: ಏಪ್ರಿಲ್‌ 19 ಮತ್ತು 20. ಸೆಮಿಫೈನಲ್‌ (ಮೊದಲ ಚರಣ): ಏ. 23 ಮತ್ತು 24. ಸೆಮಿಫೈನಲ್ (ಎರಡನೇ ಚರಣ): ಏಪ್ರಿಲ್ 28 ಮತ್ತು 29. ಫೈನಲ್‌ ಮೇ 4.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT