ಇಂಡಿಯನ್ ಸೂಪರ್ ಲೀಗ್‌: ನಾರ್ತ್ ಈಸ್ಟ್‌ಗೆ ರೋಚಕ ಗೆಲುವು

7

ಇಂಡಿಯನ್ ಸೂಪರ್ ಲೀಗ್‌: ನಾರ್ತ್ ಈಸ್ಟ್‌ಗೆ ರೋಚಕ ಗೆಲುವು

Published:
Updated:
Deccan Herald

ಕೋಲ್ಕತ್ತ: ಅಂತಿಮ ನಿಮಿಷದಲ್ಲಿ ರಾವ್ಲಿನ್ ಬೋರ್ಜೆಸ್ ಗಳಿಸಿದ ಗೋಲಿನ ಬಲದಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ಗುರುವಾರದ ಪಂದ್ಯದಲ್ಲಿ ಆತಿಥೇಯ ಅಟ್ಲೆಟಿಕೊ ಡಿ ಕೋಲ್ಕತ್ತ ತಂಡವನ್ನು ಮಣಿಸಿತು.

ತವರಿನಿಂದ ಹೊರಗೆ ಸತತ ಏಳು ಪಂದ್ಯಗಳನ್ನು ಸೋತು ಇಲ್ಲಿಗೆ ಬಂದಿದ್ದ ಯುನೈಟೆಡ್‌ ತಂಡವನ್ನು ಕೋಲ್ಕತ್ತ ಆರಂಭದಲ್ಲಿ ತಬ್ಬಿಬ್ಬುಗೊಳಿಸಿತು. ಐದನೇ ನಿಮಿಷದಲ್ಲಿ ಕೋಲ್ಕತ್ತಗೆ ಕಾರ್ನರ್ ಕಿಕ್ ಅವಕಾಶ ಲಭಿಸಿತ್ತು. ನೌಸೇರ್‌ ತೆಗೆದ ಕಿಕ್‌ ಗೋಲುಪೆಟ್ಟಿಗೆ ಯತ್ತ ಸಾಗಿತ್ತು. ಆದರೆ ಎದುರಾಳಿ ತಂಡದ ರಕ್ಷಣಾ ವಿಭಾಗದವರು ಚಾಕಚಕ್ಯತೆ ಮೆರೆದು ತಂಡವನ್ನು ಅಪಾಯದಿಂದ ಪಾರು ಮಾಡಿದರು. 18ನೇ ನಿಮಿಷದಲ್ಲಿ ಯುನೈಟೆಡ್‌ಗೆ ಫ್ರೀ ಕಿಕ್ ಅವಕಾಶ ಲಭಿಸಿತ್ತು. ಆದರೆ ಇದನ್ನು ಸದುಪಯೋಗಪಡಿಸಿಕೊಳ್ಳಲು ಸೇನಾ ರಾಲ್ಟೆಗೆ ಸಾಧ್ಯವಾಗಲಿಲ್ಲ. 32ನೇ ನಿಮಿಷದಲ್ಲಿ ರಾಲ್ಟೆಗೆ ರೆಫರಿ ರೆಡ್ ಕಾರ್ಡ್‌ ತೋರಿಸಿದರು.

ಮೊದಲಾರ್ಧದಲ್ಲಿ ಗೋಲು ಗಳಿಸದೆ ವಿರಾಮಕ್ಕೆ ತೆರಳಿದ ಉಭಯ ತಂಡಗಳು ದ್ವಿತೀಯಾರ್ಧದಲ್ಲೂ ಜಿದ್ದಾಜಿದ್ದಿಯ ಪೈಪೋಟಿ ನಡೆಸಿದರು. ಆದರೆ ಕೊನೆಗೆ ಗೆಲುವು ನಾರ್ತ್‌ ಈಸ್ಟ್ ಪಾಲಾಯಿತು.

ಕೇರಳ ಬ್ಲಾಸ್ಟರ್ಸ್‌ಗೆ ಮುಂಬೈ ಸವಾಲು:

ಕೊಚ್ಚಿ: ಮೊದಲ ಪಂದ್ಯದಲ್ಲಿ ಬಲಿಷ್ಠ ಎಟಿಕೆ ತಂಡವನ್ನು ಅದರ ತವರಿನಲ್ಲೇ ಮಣಿಸಿರುವ ಕೇರಳ ಬ್ಲಾಸ್ಟರ್ಸ್ ತಂಡ ಶುಕ್ರವಾರದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಸೆಣಸಲಿದೆ. ಮೊದಲ ಪಂದ್ಯದಲ್ಲಿ ಜೆಮ್‌ಶೆಡ್‌ಪುರ ಎಫ್‌ಸಿ ಎದುರು 0–2ರಿಂದ ಸೋತಿರುವ ಮುಂಬೈ ತಂಡ ಒತ್ತಡದಲ್ಲಿದ್ದು ಬ್ಲಾಸ್ಟರ್ಸ್ ತಂಡವನ್ನು ಅದರ ತವರಿನಲ್ಲೇ ಎದುರಿಸುವ ಸವಾಲು ಹೊಂದಿದೆ.

ಕೋಲ್ಕೊತ್ತದಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ 2-0 ಗೋಲುಗಳಿಂದ ಎಟಿಕೆಯನ್ನು ಮಣಿಸಿ ಶುಭಾರಂಭ ಮಾಡಿತ್ತು.

ಕೊಚ್ಚಿಯಲ್ಲಿ ಮುಂಬೈ ತಂಡಕ್ಕೆ ಈ ವರೆಗೆ ಒಮ್ಮೆಯೂ ಗೆಲ್ಲಲು ಆಗಲಿಲ್ಲ. ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರು ಡ್ರಾಗೊಂಡಿದ್ದು ಒಂದರಲ್ಲಿ ಸೋತಿದೆ. ಇದರಿಂದ ತಂಡದ ಮನೋಬಲ ಸಹಜಯವಾಗಿ ಕುಗ್ಗಿದೆ. ಮೊದಲ ಪಂದ್ಯದಲ್ಲಿ ಕೆಲವು ಆಟಗಾರರು ನಿರೀಕ್ಷಿತ ಸಾಮರ್ಥ್ಯ ತೋರದ ಕಾರಣ ಕೋಚ್ ಜಾರ್ಜ್ ಕೋಸ್ಟಾ ಶುಕ್ರವಾರ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !