ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಗುವಾಹಟಿಯಲ್ಲಿ ಸಮಬಲದ ಹೋರಾಟ

ಮಿಂಚಿದ ಬಾರ್ತಲೋಮ್‌, ಫಾರೂಕ್‌
Last Updated 25 ಅಕ್ಟೋಬರ್ 2018, 17:25 IST
ಅಕ್ಷರ ಗಾತ್ರ

ಗುವಾಹಟಿ: ಬಾರ್ತಲೋಮ್‌ ಒಗ್ಬೆಚೆ ಮತ್ತು ಫಾರೂಕ್‌ ಚೌಧರಿ ಗಳಿಸಿದ ತಲಾ ಒಂದೊಂದು ಗೋಲುಗಳ ನೆರವಿನಿಂದ ನಾರ್ತ್ ಈಸ್ಟ್ ಯುನೈಟೆಡ್‌ ಮತ್ತು ಜೆಮ್‌ಶೆಡ್‌ಪುರ್ ಎಫ್‌ಸಿ ತಂಡಗಳ ಹೋರಾಟ ಸಮಬಲದಲ್ಲಿ ಮುಕ್ತಾಯಗೊಂಡಿತು.

ಗುರುವಾರ ರಾತ್ರಿ ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಉಭಯ ತಂಡಗಳು 1–1ರಿಂದ ಡ್ರಾ ಸಾಧಿಸಿದವು. 20ನೇ ನಿಮಿಷದಲ್ಲಿ ನಾರ್ತ್ ಈಸ್ಟ್‌ಗೆ ಬಾರ್ತಲೋಮ್‌ ಮುನ್ನಡೆ ಗಳಿಸಿ ಕೊಟ್ಟುರು. ಆದರೆ ದ್ವಿತೀಯಾರ್ಧದಲ್ಲಿ ಫಾರೂಕ್‌ ಚೌಧರಿ (49ನೇ ನಿಮಿಷ) ಗೋಲು ಗಳಿಸಿ ತಿರುಗೇಟು ನೀಡಿದರು.

ನಾರ್ತ್ ಈಸ್ಟ್ ಯುನೈಟೆಡ್‌ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಜೆಮ್‌ಶೆಡ್‌ಪುರ ತಂಡಕ್ಕೆ ಸಾಕಷ್ಟು ಅವಕಾಶಗಳು ಲಭಿಸಿದ್ದರೂ ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಆಗಲಿಲ್ಲ. 20ನೇ ನಿಮಿಷದಲ್ಲಿ ಗೋಲು ಗಳಿಸಿದ ಬಾರ್ತಲೋಮ್‌ಗೆ ಕೆಲವೇ ನಿಮಿಷಗಳಲ್ಲಿ ಮೊತ್ತೊಮ್ಮೆ ಚೆಂಡನ್ನು ಗುರಿ ಸೇರಿಸುವ ಅವಕಾಶ ಲಭಿಸಿತ್ತು. ಆದರೆ ಅವರು ಫಲ ಕಾಣಲಿಲ್ಲ. ಅವರು ಒದ್ದ ಚೆಂಡು ಗೋಲುಪೆಟ್ಟಿಗೆಯ ಅಂಚಿಗೆ ತಗುಲಿ ಹೊರ ಸಾಗಿತು.

ದ್ವಿತೀಯಾರ್ಧದಲ್ಲಿ ಆಕ್ರಮಣಕ್ಕೆ ಮುಂದಾದ ಎದುರಾಳಿ ತಂಡ ಗೋಲು ಗಳಿಸಿ ನಿಟ್ಟುಸಿರು ಬಿಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT