ಶುಕ್ರವಾರ, ಜನವರಿ 24, 2020
28 °C

ಐಎಸ್‌ಎಲ್‌: ಅಗ್ರಸ್ಥಾನಕ್ಕೆ ಎಟಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮೊದಲಾರ್ಧದಲ್ಲಿ ಮೋಡಿ ಮಾಡಿದ ಎಟಿಕೆ ಎಫ್‌ಸಿ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.

ಮುಂಬೈ ಫುಟ್‌ಬಾಲ್‌ ಅರೇನಾದಲ್ಲಿ ನಡೆದ ಆರನೇ ಆವೃತ್ತಿಯ ಲೀಗ್‌ನ 51ನೇ ಹಣಾಹಣಿಯಲ್ಲಿ ಎಟಿಕೆ 2–0 ಗೋಲುಗಳಿಂದ ಆತಿಥೇಯ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಮಣಿಸಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 21ಕ್ಕೆ ಹೆಚ್ಚಿಸಿಕೊಂಡು ಅಗ್ರಪಟ್ಟಕ್ಕೆ ಮರಳಿತು.

ಆರಂಭದಿಂದಲೇ ವೇಗದ ಆಟಕ್ಕೆ ಒತ್ತು ನೀಡಿದ ಕೋಲ್ಕತ್ತದ ತಂಡ 28ನೇ ನಿಮಿಷದಲ್ಲಿ ಖಾತೆ ತೆರೆಯಿತು. ಪ್ರಣಯ್‌ ಹಲ್ದಾರ್‌ ಚೆಂಡನ್ನು ಗುರಿ ಸೇರಿಸಿದರು.

ವಿರಾಮಕ್ಕೆ ಎರಡು ನಿಮಿಷ ಬಾಕಿ ಇದ್ದಾಗ (43ನೇ ನಿ.) ಮೈಕಲ್ ಸೂಸೈರಾಜ್‌ ಕಾಲ್ಚಳಕ ತೋರಿದರು. ಹೀಗಾಗಿ ತಂಡದ ಮುನ್ನಡೆ 2–0ಗೆ ಹೆಚ್ಚಿತು.

ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಮುಂಬೈ ತಂಡ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಬಹುದೆಂದು ಊಹಿಸಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಯಿತು. ಎದುರಾಳಿಗಳ ಪ್ರಯತ್ನಗಳಿಗೆ ಅಡ್ಡಿಯಾದ ಎಟಿಕೆ ಸಂಭ್ರಮಿಸಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು