ಸೋಮವಾರ, ಜುಲೈ 4, 2022
21 °C

ಐಎಸ್‌ಎಲ್‌: ಮುಂಬೈಗೆ ಮಣಿದ ಡೆಲ್ಲಿ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಮುಂಬೈ: ಮೊಡು ಸೌಗೊ (30ನೇ ನಿಮಿಷ) ಮತ್ತು ಅರ್ನಾಲ್ಸ್‌ ಇಸೊಕೊ ಅವರ ಪ್ರಭಾವಿ ಆಟದ ನೆರವಿನಿಂದ ಮುಂಬೈ ಸಿಟಿ ಎಫ್‌ಸಿ ತಂಡ ಐಎಸ್‌ಎಲ್‌ ಪಂದ್ಯದಲ್ಲಿ ಗೆದ್ದಿದೆ.

ಮುಂಬೈ ಫುಟ್‌ಬಾಲ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್ ತಂಡವನ್ನು ಆತಿಥೇಯರು 2–0 ಗೋಲುಗಳಿಂದ ಮಣಿಸಿದರು. ಕಳೆದ ಪಂದ್ಯದಲ್ಲಿ ಗೋವಾ ಎಫ್‌ಸಿ ಎದುರು 5–0 ಗೋಲುಗಳಿಂದ ಸೋತಿದ್ದ ಮುಂಬೈ ನಿರಾಸೆಯೊಂದಿಗೆ ತವರಿಗೆ ಮರಳಿತ್ತು. ಶನಿವಾರದ ಜಯದೊಂದಿಗೆ ತಂಡ ಸಮಾಧಾನದ ನಿಟ್ಟುಸಿರು ಬಿಟ್ಟಿತು. ಡೆಲ್ಲಿ ಡೈನಾಮೋಸ್‌ ಈ ಬಾರಿಯ ಟೂರ್ನಿಯಲ್ಲಿ ಈ ವರೆಗೆ ಗೆಲುವಿನ ಖಾತೆ ತೆರೆಯಲಿಲ್ಲ. ಮೊದಲ ಮೂರು ಪಂದ್ಯಗಳನ್ನು ಸೋತಿದ್ದ ತಂಡ ಕಳೆದ ಪಂದ್ಯದಲ್ಲಿ ಬ್ಲಾಸ್ಟರ್ಸ್‌ ಎದುರು ಡ್ರಾ ಸಾಧಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು