ಗುರುವಾರ , ಏಪ್ರಿಲ್ 15, 2021
26 °C

ಐಎಸ್‌ಎಲ್‌ ಟೂರ್ನಿ: ಎರಡು ತಿಂಗಳಲ್ಲಿ ಆರು ಪಂದ್ಯಗಳ ದಿನಾಂಕ ಬದಲು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿವಿಧ ಕಾರಣಗಳಿಂದ ಐಎಸ್‌ಎಲ್‌ ಟೂರ್ನಿಯ ಆರು ಪಂದ್ಯಗಳ ದಿನಾಂಕ ಬದಲಿಸಲಾಗಿದೆ.

ಈ ಕುರಿತು ಐಎಸ್‌ಎಲ್‌ ವೆಬ್‌ಸೈಟ್‌ ಹೇಳಿಕೆ ಬಿಡುಗಡೆ ಮಾಡಿದೆ. ಪೌರತ್ವ ಕಾಯ್ದೆ ಸಂಬಂಧ ನಡೆದ ಪ್ರತಿಭಟನೆಗಳ ಕಾರಣ ಗುವಾಹಟಿಯಲ್ಲಿ ಡಿಸೆಂಬರ್‌ 12ರಂದು ನಡೆಯಬೇಕಿದ್ದ ನಾರ್ತ್‌ ಈಸ್ಟ್‌ ಯುನೈಟೆಡ್‌ ಎಫ್‌ಸಿ–ಚೆನ್ನೈಯಿನ್‌ ಎಫ್‌ಸಿ ನಡುವಣ ಪಂದ್ಯವನ್ನು ಮುಂದೂಡಲಾಗಿತ್ತು.  ಈ ಪಂದ್ಯವನ್ನು ಫೆಬ್ರುವರಿ 25ರಂದು ಗುವಾಹಟಿಯ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗ ಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಜಮ್‌ಶೆಡ್‌ಪುರ ಎಫ್‌ಸಿ ಎದುರು ಆಡಬೇಕಿರುವ ನಾರ್ತ್‌ಈಸ್ಟ್‌ ಯುನೈ ಟೆಡ್‌ ತಂಡದ ಇನ್ನೊಂದು ಪಂದ್ಯವನ್ನು (ಜನವರಿ 2ರಂದು ನಿಗದಿಯಾಗಿತ್ತು) ಕ್ರೀಡಾಂಗಣದ ಅಲಭ್ಯತೆಯ ಕಾರಣ ಫೆಬ್ರುವರಿ 10ಕ್ಕೆ ಮುಂದೂಡಲಾಗಿದೆ. ಏಕೆಂದರೆ ಜನವರಿ 2ರಿಂದ 22ರವರೆಗೆ ಖೇಲೋ ಇಂಡಿಯಾ ಯೂತ್‌ ಗೇಮ್ಸ್ ನಡೆಯಲಿವೆ.

ಬೆಂಗಳೂರು ಎಫ್‌ಸಿ –ಚೆನ್ನೈಯಿನ್‌ ಎಫ್‌ಸಿ; ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ–ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ನಡುವಣ (ಫೆಬ್ರುವರಿ 7 ಮತ್ತು 9ರಂದು ನಿಗದಿಯಾಗಿದ್ದ) ಪಂದ್ಯಗಳ ದಿನಾಂಕಗಳನ್ನು ಅದಲು–ಬದಲು ಮಾಡಲಾಗಿದೆ. ಫೆಬ್ರುವರಿ 12ರಂದು ಹೈದರಾಬಾದ್‌ ಎಫ್‌ಸಿ ಹಾಗೂ ಜಮ್‌ಶೆಡ್‌ಪುರ ಎಫ್‌ಸಿ ಆಡಬೇಕಿದ್ದ ಪಂದ್ಯವನ್ನು 13ಕ್ಕೆ, ಎಫ್‌ಸಿ ಗೋವಾ ಹಾಗೂ ಮುಂಬೈ ಸಿಟಿ ಎಫ್‌ಸಿ ತಂಡಗಳು ಸೆಣಸಬೇಕಿದ್ದ ಫೆಬ್ರುವರಿ 13ರ ಪಂದ್ಯವನ್ನು ಫೆಬ್ರುವರಿ 12ಕ್ಕೆ ಹಿಂದೂಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು