ಶನಿವಾರ, ಏಪ್ರಿಲ್ 4, 2020
19 °C
ಐಎಸ್‌ಎಲ್‌ ಸೆಮಿಫೈನಲ್: ಇಂದು ಗೋವಾ ಎದುರು ಎರಡನೇ ಲೆಗ್‌ನ ಹಣಾಹಣಿ

ಚೆನ್ನೈಯಿನ್‌ಗೆ ಫೈನಲ್‌ ಕನಸು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಡಗಾಂವ್‌: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಆರನೇ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸಲು ಕಾತರವಾಗಿರುವ ಚೆನ್ನೈಯಿನ್‌ ಎಫ್‌ಸಿ ತಂಡ ಈ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಇಡಬೇಕಿದೆ.

ಇಲ್ಲಿನ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಸೆಮಿಫೈನಲ್‌ನ ಎರಡನೇ ಲೆಗ್‌ನ ಹಣಾಹಣಿಯಲ್ಲಿ ಚೆನ್ನೈಯಿನ್‌ ತಂಡ ಆತಿಥೇಯ ಎಫ್‌ಸಿ ಗೋವಾ ವಿರುದ್ಧ ಸೆಣಸಲಿದೆ.

ತವರಿನಲ್ಲಿ ನಡೆದಿದ್ದ ಮೊದಲ ಲೆಗ್‌ನ ಹಣಾಹಣಿಯಲ್ಲಿ 4–1 ಗೋಲುಗಳಿಂದ ಗೆದ್ದಿರುವ ಚೆನ್ನೈಯಿನ್‌ ತಂಡ ಒಂದೊಮ್ಮೆ 1–3ಯಿಂದ ಸೋತರೂ ಉತ್ತಮ ಗೋಲು ಗಳಿಕೆಯ ಆಧಾರದಲ್ಲಿ (5–4) ಫೈನಲ್‌ ಪ್ರವೇಶಿಸಲಿದೆ. ಗೋವಾ ತಂಡ ಫೈನಲ್‌ ಪ್ರವೇಶಿಸಬೇಕಾದರೆ 4–0 ಅಂತರದಿಂದ ಗೆಲ್ಲಲೇಬೇಕು.

ವೈಯಕ್ತಿಕ ಕಾರಣಗಳಿಂದಾಗಿ ಮೊದಲ ಲೆಗ್‌ನ ಪಂದ್ಯಕ್ಕೆ ಅಲಭ್ಯರಾಗಿದ್ದ ಎಡು ಬೇಡಿಯಾ ಶನಿವಾರ ಕಣಕ್ಕಿಳಿಯಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಬ್ರೆಂಡನ್‌ ಫರ್ನಾಂಡೀಸ್‌ ಮತ್ತು ಹ್ಯೂಗೊ ಬೌಮಸ್‌ ಅವರೂ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಒಂದೊಮ್ಮೆ ಇವರು ಅಂತಿಮ ಬಳಗದಲ್ಲಿ ಆಡಿದರೆ ಗೋವಾ ತಂಡದ ಶಕ್ತಿ ಹೆಚ್ಚಲಿದೆ.

ಚೆನ್ನೈಯಿನ್‌ ತಂಡದಲ್ಲೂ ಬಲಿಷ್ಠ ಆಟಗಾರರಿದ್ದಾರೆ. ಹೀಗಾಗಿ ಗೋವಾ ತಂಡದ ಗೆಲುವಿನ ಹಾದಿ ಸುಲಭದ್ದಂತೂ ಅಲ್ಲ.

ಪಂದ್ಯದ ಆರಂಭ: ರಾತ್ರಿ 7.30.
ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು