ಮಂಗಳವಾರ, ಮೇ 17, 2022
25 °C

ಜೆಎಲ್‌ಎನ್‌ ಕ್ರೀಡಾಂಗಣದಲ್ಲಿ ಐಎಸ್‌ಎಲ್ ಫೈನಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಡಗಾಂವ್‌: ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಪಂದ್ಯವು ಮಾರ್ಚ್‌ 13ರಂದು ಫಟೋರ್ಡದ ಜವಾಹರಲಾಲ್ ನೆಹರೂ(ಜೆಎಲ್‌ಎನ್‌) ಕ್ರೀಡಾಂಗಣದಲ್ಲಿ ನಡೆಯಲಿದೆ. ದಾಖಲೆಯ ಮೂರನೇ ಬಾರಿಗೆ ಈ ಕ್ರೀಡಾಂಗಣ ಟೂರ್ನಿಯ ಆತಿಥ್ಯ ವಹಿಸಲಿದೆ ಎಂದು ಬುಧವಾರ ಸಂಘಟಕರು ತಿಳಿಸಿದ್ದಾರೆ.

ಟೂರ್ನಿಯ ಮೊದಲ ಲೆಗ್‌ನ ಸೆಮಿಫೈನಲ್‌ ಪಂದ್ಯಗಳು ಬ್ಯಾಂಬೊಲಿಮ್‌ ಜಿಎಂಸಿ ಕ್ರೀಡಾಂಗಣ ಹಾಗೂ ಜೆಎಲ್‌ಎನ್‌ನಲ್ಲಿ ಕ್ರಮವಾಗಿ ಮಾರ್ಚ್‌ ಐದು ಹಾಗೂ ಆರರಂದು ನಡೆಯಲಿವೆ. ಇದೇ ಕ್ರೀಡಾಂಗಣಗಳಲ್ಲಿ ಎರಡನೇ ಲೆಗ್‌ನ ಪಂದ್ಯಗಳು ನಿಗದಿಯಾಗಿವೆ.

ಫೆಬ್ರುವರಿ 28ಕ್ಕೆ ಲೀಗ್ ಹಂತದ ಪಂದ್ಯಗಳು ಮುಗಿಯಲಿವೆ. ಲೀಗ್‌ನ ಕೊನೆಯ ಪಂದ್ಯವು ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಎಟಿಕೆ ಮೋಹನ್ ಬಾಗನ್ ಹಾಗೂ ಎರಡನೇ ಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿ ಮಧ್ಯೆ ನಡೆಯಲಿದೆ. ಇವೆರಡೂ ತಂಡಗಳು ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು