ಶುಕ್ರವಾರ, ಜನವರಿ 17, 2020
22 °C

ಕೆಎಸ್‌ಇಬಿ ತಂಡಕ್ಕೆ ಸಿಎಂ ಕಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ತಿರುವನಂತಪುರದ ಕೆಎಸ್‌ ಇಬಿ ತಂಡ ಮಂಡ್ಯ ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ ಆಶ್ರಯದಲ್ಲಿ ನಡೆದ ಅಖಿಲ ಭಾರತ ಟೂರ್ನಿಯಲ್ಲಿ ಗೆದ್ದು ‘ಸಿಎಂ ಕಪ್‌’ ತನ್ನದಾಗಿಸಿಕೊಂಡಿತು. ‌

ಸರ್‌ ಎಂ.ವಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಕೆಎಸ್‌ ಇಬಿ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 5-3 ಗೋಲುಗಳಿಂದ ಬೆಂಗಳೂರಿನ ಎಚ್‌ಎಎಲ್‌ ತಂಡವನ್ನು ಮಣಿಸಿತು. ‌‌

ಪ್ರಬಲ ಪೈಪೋಟಿ ಕಂಡುಬಂದ ಪಂದ್ಯ ನಿಗದಿತ ಅವಧಿಯಲ್ಲಿ ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತು. ಇದ ರಿಂದ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾ ಯಿತು. ಕೆಎಸ್‌ಇಬಿ ತಂಡದ ಪರ ಶಿನು, ಪಿ.ಮೊಹಮ್ಮದ್‌, ವಿಘ್ನೇಶ್‌, ಜಿನೇಶ್‌ ಮತ್ತು ಫ್ರಾನ್ಸಿಸ್‌ ಗೋಲು ಗಳಿಸಿದರು. ಎಚ್‌ಎಎಲ್ ಪರ ರವಿ, ಬಿಜೋಯ್‌ ಹಾಗೂ ಆದಿರಾಜ್‌ ಚೆಂಡನ್ನು ಗುರಿ ಸೇರಿಸಿದರು. ಚಾಂಪಿಯನ್‌ ತಂಡ ₹50 ಸಾವಿರ ನಗದು ಬಹುಮಾನ ತನ್ನದಾಗಿಸಿಕೊಂಡರೆ, ‘ರನ್ನರ್‌ ಅಪ್‌’ ತಂಡ ₹25 ಸಾವಿರ ಬಹುಮಾನ ಗಳಿಸಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು