ಬೆಂಗಳೂರು: ರಾಹುಲ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ರಾಯಲ್ಸ್ ಎಫ್‌ಸಿ ತಂಡ ಬೆಂಗಳೂರು ಬ್ಲೂಸ್ ಕಪ್‌ಗಾಗಿ ನಡೆಯುತ್ತಿರುವ ಬಿಡಿಎಫ್‌ಎ ‘ಬಿ’ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಸೌತ್ ಯುನೈಟೆಡ್ ಅಕಾಡೆಮಿಯ ಮೈದಾನದಲ್ಲಿ ಗುರುವಾರ ನಡೆದ ‘ಬಿ’ ಗುಂಪಿನ ಹಣಾಹಣಿಯಲ್ಲಿ ರಾಯಲ್ಸ್ 3–1 ಗೋಲುಗಳಿಂದ ಬ್ಲಿಟ್ಜ್ ಎಫ್‌ಸಿ ತಂಡವನ್ನು ಸೋಲಿಸಿತು.

ರಾಹುಲ್ ಅವರು 8 ಮತ್ತು 28ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. 47ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ರಾಬಿನ್‌ಸನ್ ಗೆಲುವಿನ ಅಂತರ ಹೆಚ್ಚಿಸಿದರು. ಬ್ಲಿಟ್ಜ್ ತಂಡದ ಸಂತೋಷ್ 19ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಇನ್ನೊಂದು ಪಂದ್ಯದಲ್ಲಿ ಶ್ರೀ ಗಜಾನನ 4–2 ಗೋಲುಗಳಿಂದ ಮೊಹಮ್ಮದ್ ಸ್ಪೋರ್ಟಿಂಗ್ ಎಫ್‌ಸಿ ತಂಡವನ್ನು ಮಣಿಸಿತು.

ಗಜಾನನ ತಂಡದ ಸುರೇನ್ (65 ಮತ್ತು 70ನೇ ನಿಮಿಷ) ಮೋಡಿ ಮಾಡಿದರು. ಕಯಾವಾನನ್ (11) ಮತ್ತು ಭರತ್ (12) ತಲಾ ಒಂದು ಗೋಲು ಗಳಿಸಿದರು. ಸ್ಪೋರ್ಟಿಂಗ್ ತಂಡದ ಪ್ರೀತಂ ಮತ್ತು ಶರತ್ ಅವರು ಕ್ರಮವಾಗಿ 50 ಮತ್ತು 64ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.