ಮಂಗಳವಾರ, ಸೆಪ್ಟೆಂಬರ್ 29, 2020
28 °C

ಮಿನರ್ವ ಜೊತೆ ಡೆಲ್ಲಿ ಎಫ್‌ಸಿ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಫುಟ್‌ಬಾಲ್‌ ಕ್ರೀಡೆಯನ್ನು ಬೆಳೆಸುವ ಉದ್ದೇಶದೊಂದಿಗೆ ಮಿನರ್ವ ಎಫ್‌ಸಿ ಅಕಾಡೆಮಿಯು ಡೆಲ್ಲಿ ಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಅಕಾಡೆಮಿಯ ಮಾಲೀಕ ರಂಜಿತ್ ಬಜಾಜ್ ಈ ವಿಷಯ ತಿಳಿಸಿದ್ದು ಸ್ಥಳೀಯ ಆಟಗಾರರು, ಕೋಚ್‌ಗಳು, ಆಡಳಿತಗಾರರು ಮತ್ತು ಫುಟ್‌ಬಾಲ್‌ನಲ್ಲಿ ತೊಡಗಿಸಿಕೊಂಡಿರುವ ಇತರರ ಪ್ರತಿಭೆಯನ್ನು ಬೆಳೆಸುವುದು ಈ ಒಪ್ಪಂದದ ಉದ್ದೇಶ ಎಂದು ವಿವರಿಸಿದ್ದಾರೆ.

‘ಕಳೆದ ಬಾರಿ ಡೆಲ್ಲಿ ಲೀಗ್‌ನಲ್ಲಿ ಮೂರನೇ ಸ್ಥಾನ ಗಳಿಸಿರುವ ಡೆಲ್ಲಿ ಎಫ್‌ಸಿ ಜೊತೆಗಿನ ಈ ಸಂಬಂಧವು ದೆಹಲಿ ಭಾಗದಲ್ಲಿ ನಮ್ಮ ಅಸ್ತಿತ್ವ ತೋರಿಸಲು ನೆರವಾಗುವ ಭರವಸೆ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ದೆಹಲಿ ನಗರವು ಕಳೆದ ಕೆಲವು ವರ್ಷಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಕೆಲವು ಅತ್ಯುತ್ತಮ ಆಟಗಾರರನ್ನು ಕಾಣಿಕೆಯಾಗಿ ನೀಡಿದೆ. ದುರದೃಷ್ಟವಶಾತ್ ಈ ಆಟಗಾರರು ದೇಶಿ ಫುಟ್‌ಬಾಲ್‌ನಲ್ಲಿ ಇತರ ನಗರಗಳಲ್ಲಿ ಅಥವಾ ಬೇರೆ ಕಡೆಯ ಕ್ಲಬ್‌ಗಳಲ್ಲಿ ಆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ಇಲ್ಲೇ ಅವಕಾಶ ಕೊಡಿಸುವುದರೊಂದಿಗೆ ಇನ್ನಷ್ಟು ಹೊಸ ಪ್ರತಿಭೆಗಳನ್ನು ಬೆಳಕಿಗೆ ತರಲು ಪ್ರಯತ್ನಿಸಲಾಗುವುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು